2024 | : ಮುಂಬೈ ವಿರುದ್ಧ ಡೆಲ್ಲಿಗೆ 10 ರನ್‌ಗಳ ಜಯ ನವದೆಹಲಿ: ಶನಿವಾರದ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ವಿರುದ್ಧ ಡೆಲ್ಲಿ 10 ರನ್‌ಗಳ ಜಯ ಸಾಧಿಸಿತು. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಇಂದು ಮುಖಾಮುಖಿಯಾಗಿದ್ದವು. ಈ ಪಂದ್ಯ ದೆಹಲಿಯಲ್ಲಿ ನಡೆಯುತ್ತಿದ್ದು ಮೊದಲು ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತ್ತು. ದೆಹಲಿ ತಂಡ ಮೊದಲು ಬ್ಯಾಟ್‌ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ದೆಹಲಿ 257 ರನ್‌ ಪೇರಿಸಿದೆ. ಗುರ್ಕ್ 84, ಸ್ಟಬ್ಸ್‌ 48, ಹೋಪ್‌ 41 ರನ್‌ ಹೊಡೆದು ಗಮನ ಸೆಳೆದರು. ಮುಂಬೈ ಪರ ಬೂಮ್ರಾ, ವುಡ್‌, ಚಾವ್ಲಾ, ನಬಿ ತಲಾ 1 ವಿಕೆಟ್‌ ಪಡೆದರು. ಮುಂಬೈ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 247 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಮುಂಬೈ ತಂಡ 10 ರನ್‌ಗಳ ಸೋಲು ಅನುಭವಿಸಿತು. 43. 10 () ://./ # #IPL2024 # ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.