ಐಪಿಎಲ್ ಯಶಸ್ವಿ ಮುಕ್ತಾಯ | ಮೈದಾನ ಸಿಬ್ಬಂದಿಗೆ ಭರ್ಜರಿ ಉಡುಗೊರೆ ಘೋಷಿಸಿದ ಜಯ್ ಶಾ ಬೆಂಗಳೂರು: ಈ ಬಾರಿಯ ಐಪಿಎಲ್ ಪಂದ್ಯಗಳು ನಡೆದ 10 ಕ್ರೀಡಾಂಣಗಳ ಮೈದಾನ ಸಿಬ್ಬಂದಿ ಹಾಗೂ ಪಿಚ್ ಕ್ಯುರೇಟರ್‌ಗಳಿಗೆ ಬಿಸಿಸಿಐ ತಲಾ ₹25 ಲಕ್ಷ ಬಹುಮಾನ ಘೋಷಿಸಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಎಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ. ಮೈದಾನ ಸಿಬ್ಬಂದಿಯನ್ನು ಅಸಾಧಾರಣ ಹೀರೋಗಳು ಎಂದು ಅವರು ಬಣ್ಣಸಿದ್ದಾರೆ. T20 , . , 10 25… ‘ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ‌ಅದ್ಭುತವಾದ ಪಿಚ್‌ಗಳನ್ನು ಒದಗಿಸಲು ಮೈದಾನ ಸಿಬ್ಬಂದಿ ದಣಿವರಿಯದೆ ಕೆಲಸ ಮಾಡಿದ್ದಾರೆ. ಮೆಚ್ಚುಗೆಯ ಸಂಕೇತವಾಗಿ ಐಪಿಎಲ್ ಪಂದ್ಯಗಳು ನಡೆದ 10 ಕ್ರೀಡಾಂಗಣದ ಮೈದಾನ ಸಿಬ್ಬಂದಿಗಳು ಹಾಗೂ ಕ್ಯುರೇಟರ್‌ಗಳಿಗೆ ತಲಾ ₹ 25 ಲಕ್ಷ ಬಹುಮಾನ ನೀಡಲಾಗುತ್ತದೆ. 3 ಹೆಚ್ಚುವರಿ ಕ್ರೀಡಾಂಗಣದ ಸಿಬ್ಬಂದಿಗೆ ₹10 ಲಕ್ಷ ನೀಡಲಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ, ‘ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.