ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರಿಕೆಟಿಗ ವೆಂಕಟೇಶ್‌ ಅಯ್ಯರ್‌ ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆಟಗಾರ ಮತ್ತು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಆಲ್‌ ರೌಂಡರ್‌ ವೆಂಕಟೇಶ್ ಅಯ್ಯರ್‌ ಅವರು ಶ್ರುತಿ ರಘುನಾಥನ್‌ ಅವರೊಂದಿಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 2023ರ ನವೆಂಬರ್‌ನಲ್ಲಿ ಈ ಜೋಡಿಯ ನಿಶ್ವಿತಾರ್ಥ ನೆರವೇರಿತ್ತು. ಇಂದು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ವೆಂಕಟೇಶ್‌ ಮತ್ತು ಶ್ರುತಿ ಮದುವೆಯ ಕ್ಷಣಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾಷನ್‌ ಡಿಸೈನರ್‌ ಆಗಿರುವ ಶ್ರುತಿ ಅವರು ಬೆಂಗಳೂರಿನ ಲೈಫ್‌ಸ್ಟೈಲ್‌ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಕಪ್‌ ಗೆದ್ದಿದ್ದ ಕೆಕೆಆರ್‌ನ ಗೆಲುವಿಗೆ ವೆಂಕಟೇಶ್‌ ಅಯ್ಯರ್‌ ಅವರ ಪಾಲು ದೊಡ್ಡದು. ಕೊನೆಯ ಪಂದ್ಯದಲ್ಲಿ 26 ಬಾಲ್‌ಗಳಿಗೆ 52 ರನ್‌ಗಳಿಸುವ ಮೂಲಕ ತಂಡದ ಜಯಕ್ಕೆ ಸಾಥ್‌ ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.