T20 : ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಜಯ ಆಂಟಿಗುವಾ: ಇಲ್ಲಿ ನಡೆದ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ನಮೀಬಿಯಾ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ನಮೀಬಿಯಾ 17 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 72 ರನ್‌ ಮಾತ್ರಗಳಿಸಿತು. ನಮೀಬಿಯಾ ಪರವಾಗಿ ನಾಯಕ ಎರಸ್ಮಾಸ್‌ 36 ರನ್‌ ಹೊಡೆದು ಗಮನ ಸೆಳೆದರು. ಮಾರಕ ದಾಳಿ ನಡೆಸಿದ ಆಸ್ಟ್ರೇಲಿಯಾದ ಜಂಪಾ 4 ವಿಕೆಟ್‌, ಹಾಜೆಲ್‌ವುಡ್‌, ಸ್ಟೊಯಿನ್ಸ್‌ ತಲಾ 2 ವಿಕೆಟ್‌ ಪಡೆದರು. ಈ ಕಡಿಮೆ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 5.4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 74 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ನಮೀಬಿಯಾ ಪರ ಡೇವಿಡ್‌ ಒಂದು ವಿಕೆಟ್‌ ಪಡೆದರು. ಸ್ಕೋರ್‌... ನಮೀಬಿಯಾ: 72/10 (17 ಓವರ್‌) ಆಸ್ಟ್ರೇಲಿಯಾ: 74/1 (5.4 ಓವರ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.