T20 : ಬಾಂಗ್ಲಾ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ, ಸೆಮಿಫೈನಲ್‌ಗೆ ಲಗ್ಗೆ ವಿನ್ಸೆಂಟ್‌: ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅಫ್ಗಾನಿಸ್ತಾನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಗಾನಿಸ್ತಾನ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶ ಪಡೆಯಿತು. ಅಫ್ಗಾನಿಸ್ತಾನ ಆಟಗಾರರ ವಿರೋಚಿತ ಆಟದ ಫಲವಾಗಿ ಅಫ್ಗನ್‌ ಪಡೆ ಹೊಸ ವಿಕ್ರಮ ಬರೆಯಿತು. - 🤯 📲://./CLjwVjb6tf#T20WorldCup # ../GD2Wvs9oiY ಮೊದಲು ಬ್ಯಾಟ್‌ ಮಾಡಿದ ಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 115 ರನ್‌ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 105 ರನ್‌ಗಳಿಗೆ ಸರ್ವಪತನವಾಯಿತು. ಅಫ್ಗಾನಿಸ್ತಾನ ಪರ ಗುರ್ಬಜ್‌ 43 ರನ್‌ ಹೊಡೆದು ಗಮನ ಸೆಳೆದರು. ರಶೀದ್‌ ಖಾನ್‌ 19 ರನ್‌ ಹೊಡೆದರು. ಉಳಿದ ಆಟಗಾರರು ಅಲ್ಪ ಮೊತ್ತಕೆ ಔಟ್‌ ಆದರು. ಬಾಂಗ್ಲಾದೇಶದ ಪರ ರಶೀದ್‌ ಹೊಸೇನ್‌ 3 ವಿಕೆಟ್‌ ಪಡೆದರು. ಅಫ್ಗಾನಿಸ್ತಾನದ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ ಪಡೆ 105 ರನ್‌ ಪೇರಿಸಲು ಪರದಾಡಿತು. ಲಿಟನ್‌ ದಾಸ್‌ ಮಾತ್ರ 54 ರನ್‌ ಹೊಡೆದು ಗಮನ ಸೆಳೆದರು. ಅಫ್ಗನ್‌ ಪಡೆಯ ನವೀನ್‌, ರಶೀದ್‌ ಖಾನ್‌ ತಲಾ 4 ವಿಕೆಟ್‌ ಪಡೆದರು. ಮಳೆಯ ಕಾಟದ ನಡುವೆಯೂ ಅಫ್ಗಾನಿಸ್ತಾನ ರೋಚಕ ಜಯ ದಾಖಲಿಸಿತು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸೆಣಸಲಿದೆ. ಸ್ಕೋರ್‌... ಅಫ್ಗಾನಿಸ್ತಾನ: 115/5 ( 20 ಓವರ್‌) ಬಾಂಗ್ಲಾದೇಶ: 105/10 (17. 5 ಓವರ್‌) 𝐖𝐇𝐀𝐓 𝐀 𝐌𝐎𝐌𝐄𝐍𝐓 𝐅𝐎𝐑 🇦🇫 #T20WorldCup 2024 - 👏 ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.