ಇಂಗ್ಲೆಂಡ್‌ ಏಕದಿನ ಕ್ರಿಕೆಟ್‌ ತಂಡಕ್ಕೆ ಮೆಕಲಂ ಕೋಚ್‌ ಲಂಡನ್‌: ಇಂಗ್ಲೆಂಡ್‌ ಟೆಸ್ಟ್‌ ಕ್ರಿಕೆಟ್‌ ತಂಡದ ಕೋಚ್‌ ಬ್ರೆಂಡನ್‌ ಮೆಕಲಂ ಅವರು ನಿಗದಿತ ಓವರ್‌ಗಳ ತಂಡದ ಕೋಚ್‌ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಬೋರ್ಡ್‌ (ಇಸಿಬಿ) ಮಂಗಳವಾರ ಪ್ರಕಟಿಸಿದೆ. ಸೀಮಿತ ಓವರ್‌ಗಳ ಸರಣಿ ಆಡಲು ಇಂಗ್ಲೆಂಡ್‌ ತಂಡದ ಭಾರತ ಪ್ರವಾಸ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅನುಕೂಲವಾಗುವಂತೆ ಜನವರಿ 2025 ರಿಂದ ಮೆಕಲಂ ಟೆಸ್ಟ್ ಮತ್ತು ಸೀಮಿತ-ಓವರ್‌ಗಳ ತಂಡಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಇಸಿಬಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.