T20 : ಸೆಮಿಫೈನಲ್ ಗೆಲುವಿನ ಬಳಿಕ ಭಾವುಕರಾದ ರೋಹಿತ್; ಕೊಹ್ಲಿ ಸಂತೈಸಿದ ರಾಹುಲ್ ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಪಂದ್ಯ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಅವರು ಭಾವುಕರಾಗಿ ಕಂಡುಬಂದರು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಬಳಿಕ ರೋಹಿತ್ ಅವರನ್ನು ಕೊಹ್ಲಿ ಸಮಾಧಾನಪಡಿಸುತ್ತಿರುವುದು ದೃಶ್ಯ ಕಂಡುಬಂದಿದೆ. 2022ರ ಟ್ವೆಂಟಿ-20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾದ ಸೋಲಿಗೆ ಭಾರತ ಸೇಡುತೀರಿಸಿಕೊಂಡಿತು. ಅಂದು ಅಡಿಲೇಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕ ರೋಹಿತ್ ಕಣ್ಣೀರು ಸುರಿಸಿದ್ದರು. ಈಗ ಈ ಎರಡೂ ಚಿತ್ರಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. (@) ಕೊಹ್ಲಿ ಅವರನ್ನು ಸಂತೈಸಿದ ರಾಹುಲ್... ಟೂರ್ನಿಯಲ್ಲಿ ಸತತ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ, ಸಹ ಆಟಗಾರರ ಮಧ್ಯೆ ಬೇಸರದಲ್ಲಿರುವುದು ಕಂಡುಬಂದಿದೆ. ಈ ವೇಳೆ ಕೋಚ್ ರಾಹುಲ್ ದ್ರಾವಿಡ್ ಸಂತೈಸುತ್ತಿರುವ ಮಗದೊಂದು ವಿಡಿಯೊ ಸಹ ಹರಿದಾಡುತ್ತಿದೆ. ಟೀಮ್ ಇಂಡಿಯಾ ಆಟಗಾರರು ಪರಸ್ಪರ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬರನ್ನೊಬ್ಬರನ್ನು ಬೆಂಬಲಿಸುತ್ತಿರುವುದು ತಂಡದಲ್ಲಿರುವ ಉತ್ತಮ ವಾತಾವರಣಕ್ಕೆ ಸಾಕ್ಷಿಯಾಗಿದೆ. , ' 💔 # ../X0nPoSdF5s . 🥹 - ! ❤️ ../JMVT2qFx2q . - 💪 ../ZVpVWBdnX0 ಮ್ಯಾಚ್ ಹೈಲೈಟ್ಸ್ ಇಲ್ಲಿ ವೀಕ್ಷಿಸಿ (@) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.