: ಅಂಪೈರ್ ಕೂಡ ವಿರಾಟ್ ಶತಕವನ್ನು ಬಯಸಿದ್ದರೇ? ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಶತಕದ (103*) ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿತು. ವಿರಾಟ್ ಕೊಹ್ಲಿ ಸಿಕ್ಸರ್ ಗಳಿಸುವ ಮೂಲಕ ಶತಕದ ಗೆರೆ ದಾಟಿದರು. ಈ ಮೂಲಕ ಭಾರತ ವಿಜಯೋತ್ಸವ ಆಚರಿಸಿತು. ಆದರೆ ಪಂದ್ಯದ ಕೊನೆಯ ಗಳಿಗೆಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ಶತಕವನ್ನು ನಿರಾಕರಿಸಲು ಬಾಂಗ್ಲಾದೇಶದ ಸ್ಪಿನ್ನರ್ ಯತ್ನಿಸಿದ್ದರು ಎಂಬ ಬಗ್ಗೆ ಆರೋಪಗಳು ಕೇಳಿಬಂದಿವೆ. ಭಾರತಕ್ಕೆ ಗೆಲ್ಲಲು ಎರಡು ರನ್ನಿನ ಅವಶ್ಯಕತೆಯಿತ್ತು. ಕೊಹ್ಲಿಗೆ ಶತಕ ದಾಖಲಿಸಲು ಮೂರು ರನ್ ಮಾತ್ರ ಬೇಕಿತ್ತು. ಈ ವೇಳೆ 41ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ನಸುಮ್ ಅಹ್ಮದ್, ಉದ್ದೇಶಪೂರ್ವಕವಾಗಿ ವೈಡ್ ಎಸೆಯಲು ಯತ್ನಿಸಿದ್ದರು ಎಂಬ ಬಗ್ಗೆ ಆರೋಪ ಕೇಳಿಬಂದಿವೆ. . ../UScWMdd1ji ಆದರೆ ಕುತೂಹಲಕಾರಿ ಎಂಬಂತೆ ಅಂಪೈರ್ ಕೂಡ ವೈಡ್ ನೀಡಿರಲಿಲ್ಲ. ಮೊದಲ ನೋಟದಲ್ಲಿ ಇದು ವೈಡ್ ಎಂದೇ ಭಾಸವಾಗಿತ್ತು. ಆದರೆ ವೈಡ್ ನೀಡದೇ ಅಂಪೈರ್ ಕೂಡ ವಿರಾಟ್ ಕೊಹ್ಲಿ ಶತಕವನ್ನು ಬಯಸಿದ್ದರು ಎಂದು ಅಭಿಮಾನಿಗಳು ಕಾಮೆಂಟಿಸಿದ್ದಾರೆ. ಬಳಿಕ ನಸುಮ್ ಎಸೆತವನ್ನು ಸಿಕ್ಸರ್‌ಗಟ್ಟಿದ ವಿರಾಟ್ ಶತಕ ಪೂರ್ಣಗೊಳಿಸುವುದರೊಂದಿಗೆ ಭಾರತವು ಸ್ಮರಣೀಯ ಗೆಲುವು ದಾಖಲಿಸಿತು. ಐಸಿಸಿ ನಿಯಮಾನುಸಾರವಾಗಿ ಅಂಪೈರ್ ವೈಡ್ ನೀಡಿರಲಿಲ್ಲ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್ ಹರಿದಾಡಲು ಕಾರಣವಾಗಿದೆ. ವೈಯಕ್ತಿಕ ಮೈಲಿಗಲ್ಲು ಕೊಹ್ಲಿ ಬಯಸಿರಲಿಲ್ಲ: ರಾಹುಲ್ ಏತನ್ಮಧ್ಯೆ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ಕೆ.ಎಲ್. ರಾಹುಲ್, ವೈಯಕ್ತಿಕ ಮೈಲಿಗಲ್ಲನ್ನು ವಿರಾಟ್ ಕೊಹ್ಲಿ ಬಯಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಜ ಹೇಳಬೇಕೆಂದರೆ ಅವರು (ವಿರಾಟ್) ಗೊಂದಲಕ್ಕೊಳಗಾಗಿದ್ದರು. ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಸಿಂಗಲ್ ಓಡದೇ ಶತಕಕ್ಕಾಗಿ ಆಡುವುದು ಉತ್ತಮವಲ್ಲ. ವೈಯಕ್ತಿಕ ಮೈಲಿಗಲ್ಲಿಗಾಗಿ ಯತ್ನಿಸುತ್ತಿದ್ದೇನೆ ಎಂಬಂತೆ ಭಾಸವಾಗಲಿದೆ ಎಂದು ವಿರಾಟ್ ಹೇಳಿರುವುದಾಗಿ ರಾಹುಲ್ ತಿಳಿಸಿದರು. ಇದಕ್ಕೆ ಉತ್ತರವಾಗಿ ನಾವು ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದ್ದೇವೆ. ಈ ಪಕ್ರಿಯೆಯಲ್ಲಿ ನೀವು ವೈಯಕ್ತಿಕ ಮೈಲಿಗಲ್ಲು ಸಾಧಿಸುವುದಾದರೆ ಏಕಾಗಬಾರದು ಎಂದು ವಿರಾಟ್‌ಗೆ ಮನವರಿಕೆ ಮಾಡಿರುವುದಾಗಿ ರಾಹುಲ್ ತಿಳಿಸಿದ್ದಾರೆ. ವಿರಾಟ್‌ಗೆ ಒಂಟಿ ರನ್ ನಾನೇ ನಿರಾಕರಿಸಿರುವುದಾಗಿ ರಾಹುಲ್ ತಿಳಿಸಿದರು. 38 ಓವರ್ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಗೆಲುವಿಗೆ 28 ರನ್ ಮಾತ್ರ ಅವಶ್ಯಕತೆಯಿತ್ತು. ವಿರಾಟ್ 73 ಹಾಗೂ ರಾಹುಲ್ 33 ರನ್ ಗಳಿಸಿ ಕ್ರೀಸಿನಲ್ಲಿದ್ದರು. ಅಲ್ಲಿಂದ ಬಳಿಕ ಅಮೋಘ ಆಟವಾಡಿದ ಕೊಹ್ಲಿ ಶತಕ ಗಳಿಸಿ ಸಂಭ್ರಮಿಸಿದರು. # ❤️# ../zw6mwbokNF # 2023. @' . ## ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.