: ಭಾರತಕ್ಕೆ 257 ರನ್ ಗೆಲುವಿನ ಗುರಿ ಒಡ್ಡಿದ ಬಾಂಗ್ಲಾದೇಶ ಪುಣೆ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 256 ರನ್ ಪೇರಿಸಿದೆ. ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವಿನ ತವಕದಲ್ಲಿರುವ ಟೀಮ್ ಇಂಡಿಯಾ, ಈ ಪಂದ್ಯ ಗೆಲ್ಲಲು 257 ರನ್ ಗಳಿಸಬೇಕಿದೆ. ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಬಾಂಗ್ಲಾದ ತಂಡವನ್ನು ಮುನ್ನಡೆಸುತ್ತಿರುವ ನಜ್ಮುಲ್ ಹೊಸೇನ್ ಶಾಂತೊ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿ ಎಂದು ಸಾಬೀತು ಮಾಡಿದ ಆರಂಭಿಕರಾದ ತಂಜೀದ್ ಹಸನ್ ಹಾಗೂ ಲಿಟನ್ ದಾಸ್ ಮೊದಲ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟರು. ಆಕರ್ಷಕ ಅರ್ಧಶತಕಗಳನ್ನು ಗಳಿಸಿದ ಹಸನ್ ಹಾಗೂ ದಾಸ್ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಹಸನ್ 51 ಹಾಗೂ ದಾಸ್ 66 ರನ್ ಗಳಿಸಿ ಮಿಂಚಿದರು. ! 🎯 2⃣5⃣7⃣ #! 2⃣ , . & . & . ▶️ ://./GpxgVtP2fb#CWC23 | # | # ../U1PJebkXxz ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ನಜ್ಮುಲ್ ಹೊಸೇನ್ ಶಾಂತೊ (8), ಮೆಹದಿ ಹಸನ್ ಮಿರಾಜ್ (3) ಹಾಗೂ ತೌಹಿದ್ ಹೃದಯ್ (16) ಬ್ಯಾಟಿಂಗ್ ವೈಫ್ಯಲ್ಯವನ್ನು ಕಂಡರು. ಈ ಮೂಲಕ ಭಾರತೀಯ ಬೌಲರ್‌ಗಳು ತಿರುಗೇಟು ನೀಡಿದರು. ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್ ಹಾಗೂ ಮೆಹಮುದುಲ್ಲಾ, ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಮೆಹಮುದುಲ್ಲಾ 46 ಹಾಗೂ ರಹೀಂ 38 ರನ್ ಗಳಿಸಿದರು. ಇನ್ನುಳಿದಂತೆ ನಸುಮ್ ಅಹಮದ್ 14 ರನ್ ಗಳಿಸಿದರು. ಭಾರತದ ಪರ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜ ತಲಾ ಎರಡು ಮತ್ತು ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಗಳಿಸಿದರು. ://./qWjA0WQ4ii ../tEo8H3gj6v 2⃣ . ✅ 2⃣ ✅ ▶️ ://./GpxgVtP2fb#CWC23 | # | # | # ../VoPPC4NtXq ✅ ✅@ & 🙌 🙌 4 140 29 . ▶️ ://./GpxgVtP2fb#CWC23 | # | # | # ../dpnRp39SGu ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.