ಡೈವ್ ಹೊಡೆದು ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್;ಟೀಕಾಕಾರರ ಬಾಯಿ ಮುಚ್ಚಿಸಿದ ರಾಹುಲ್ ಪುಣೆ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಅದ್ಭುತ ಕ್ಯಾಚ್ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯದ ಬಗ್ಗೆ ಟೀಕೆಗಳನ್ನು ಎತ್ತಿದವರಿಗೆ ಅದ್ಭುತ ಕ್ಯಾಚ್‌ ಮೂಲಕ ಕನ್ನಡಿಗ ರಾಹುಲ್ ತಕ್ಕ ಉತ್ತರ ನೀಡಿದ್ದಾರೆ. ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಎಸೆದ ಬಾಂಗ್ಲಾ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಮೆಹದಿ ಹಸನ್ ಮಿರಾಜ್ ಬ್ಯಾಟ್‌ಗೆ ಸವರಿದ ಚೆಂಡನ್ನು ವಿಕೆಟ್ ಹಿಂದುಗಡೆ ತನ್ನ ಎಡಬದಿಯತ್ತ ಅದ್ಭುತವಾಗಿ ಡೈವ್ ಹೊಡೆದು ರಾಹುಲ್ ಕ್ಯಾಚ್ ಹಿಡಿದಿದ್ದಾರೆ. ಪರಿಣಾಮ 3 ರನ್ ಗಳಿಸಿ ಔಟ್ ಆದ ಮೆಹದಿ ಪೆವಿಲಿಯನ್‌ನತ್ತ ಮರಳಿದರು. ವಿಶ್ವಕಪ್‌ಗೂ ಮುನ್ನ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಪರ-ವಿರೋಧ ಚರ್ಚೆಗಳು ಎದ್ದಿದ್ದವು. ರಾಹುಲ್ ಕೌಶಲ್ಯದ ಬಗ್ಗೆ ಟೀಕಾಕಾರರು ತಗಾದೆ ಎತ್ತಿದ್ದರು. ಈಗ ತಮ್ಮ ವಿಕೆಟ್ ಕೀಪಿಂಗ್ ಮೂಲಕವೇ ರಾಹುಲ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 🤝 210/6 5 ! ▶️ ://./GpxgVtP2fb#CWC23 | # | # | # ../vGWjKn3AhQ . 👏 . 🙌 ' 🔥 # ../it3mKoPUDL ಕೆ.ಎಲ್. ರಾಹುಲ್ ವಿಕೆಟ್ ಕೀಪಿಂಗ್ ಭಂಗಿ (ರಾಯಿಟರ್ಸ್ ಚಿತ್ರ) - . :- .# # ../0ktUDcmeeL ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.