: ಪ್ರಮುಖರನ್ನು ಉಳಿಸಿಕೊಂಡ ತಂಡಗಳು- ಆರ್‌ಸಿಬಿಯಲ್ಲೇ ಸ್ಮೃತಿ, ಶ್ರೇಯಾಂಕಾ ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಎರಡನೇ ಆವೃತ್ತಿಗೆ ಎಲ್ಲ ಐದೂ ಫ್ರಾಂಚೈಸಿಗಳು ನಿರೀಕ್ಷೆಯಂತೆಯೇ ಪ್ರಮುಖ ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡಿವೆ. 2024ರ ಟೂರ್ನಿಗೆ ಆಟಗಾರ್ತಿಯರನ್ನು ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಅವಧಿಯು ಅ.15 ರಂದು ಕೊನೆಗೊಂಡಿದೆ. ವಿದೇಶಗಳ 21 ಆಟಗಾರ್ತಿಯರು ಸೇರಿದಂತೆ ಒಟ್ಟು 60 ಮಂದಿಯನ್ನು ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. 29 ಆಟಗಾರ್ತಿಯರನ್ನು ಕೈಬಿಡಲಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸ್ಮೃತಿ ಮಂದಾನ, ಹೀದರ್‌ ನೈಟ್, ರಿಚಾ ಘೋಷ್ ಮತ್ತು ಶ್ರೇಯಾಂಕಾ ಪಾಟೀಲ್ ಸೇರಿದಂತೆ 11 ಆಟಗಾರ್ತಿಯರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಮೊದಲ ಋತುವಿನಲ್ಲಿ ತಂಡದಲ್ಲಿದ್ದ ಡೇನ್‌ ವಾನ್‌ ನೀಕರ್ಕ್, ಎರಿನ್‌ ಬರ್ನ್ಸ್, ಕೋಮಲ್‌ ಜಂಜದ್, ಮೇಗನ್‌ ಶುಟ್, ಪೂನಮ್‌ ಖೆಮ್ನರ್, ಪ್ರೀತಿ ಬೋಸ್ ಮತ್ತು ಸಹನಾ ಪವಾರ್‌ ಅವರನ್ನು ಕೈಬಿಟ್ಟಿದೆ. ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಮುಂಬೈ ಇಂಡಿಯನ್ಸ್‌ ತಂಡವು ನಾಯಕಿ ಹರ್ಮನ್‌ಪ್ರೀತ್‌ ಕೌರ್, ಹೇಯ್ಲಿ ಮ್ಯಾಥ್ಯೂಸ್ ಮತ್ತು ಯಸ್ಟಿಕಾ ಭಾಟಿಯಾ ಸೇರಿದಂತೆ 13 ಮಂದಿಯನ್ನು ತಂಡದಲ್ಲಿ ಉಳಿಸಿಕೊಂಡಿದೆ. ವಿವಿಧ ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡ ಆಟಗಾರ್ತಿಯರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂದಾನ, ಆಶಾ ಶೋಭನಾ, ದಿಶಾ ಕಾಸಟ್, ಎಲೈಸ್‌ ಪೆರಿ, ಹೀದರ್‌ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್ ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್‌ ಕೌರ್‌, ಅಮನ್‌ಜೋತ್‌ ಕೌರ್‌, ಅಮೇಲಿ ಕೆರ್, ಕ್ಲೋಯಿ ಟ್ರಯಾನ್, ಹೇಯ್ಲಿ ಮ್ಯಾಥ್ಯೂಸ್, ಹುಮೇರಾ ಕಾಝಿ, ಇಸಾಬೆಲಾ ವಾಂಗ್, ಜಿಂತಿಮಣಿ ಕಲಿತಾ, ನತಾಲಿ ಸಿವೆರ್, ಪೂಜಾ ವಸ್ತ್ರಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಖ್, ಯಸ್ಟಿಕಾ ಭಾಟಿಯಾ ಡೆಲ್ಲಿ ಕ್ಯಾಪಿಟಲ್ಸ್‌: ಅಲೀಸ್‌ ಕ್ಯಾಪ್ಸಿ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ಜೆಸ್‌ ಜೊನಾಸೆನ್, ಲಾರಾ ಹ್ಯಾರಿಸ್, ಮೆರಿಜಾನೆ ಕಾಪ್, ಮೆಗ್‌ಲ ಲಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ ಭಾಟಿಯಾ, ತಿತಾಸ್‌ ಸಾಧು ಗುಜರಾತ್‌ ಜೈಂಟ್ಸ್: ಆ್ಯಶ್ಲೆ ಗಾರ್ಡನರ್, ಬೆತ್‌ ಮೂನಿ, ಡಿ.ಹೇಮಲತಾ, ಹರ್ಲೀನ್‌ ದೇವೊಲ್, ಲಾರಾ ವೊಲ್‌ವಾರ್ಟ್, ಶಬ್ನಂ ಶಕೀಲ್, ಸ್ನೇಹಾ ರಾಣಾ, ತನುಜಾ ಕನ್ವರ್‌ ಯುಪಿ ವಾರಿಯರ್ಸ್‌: ಅಲಿಸಾ ಹೀಲಿ, ಅಂಜಲಿ ಸರವಾನಿ, ದೀಪ್ತಿ ಶರ್ಮಾ, ಗ್ರೇಸ್‌ ಹ್ಯಾರಿಸ್‌, ಕಿರಣ್ ನವಗಿರೆ, ಲಾರೆನ್‌ ಬೆಲ್, ಲಕ್ಷ್ಮಿ ಯಾದವ್, ಪಾರ್ಶ್ವಿ ಚೋಪ್ರಾ, ರಾಜೇಶ್ವರಿ ಗಾಯಕವಾಡ್, ಎಸ್‌.ಯಶಶ್ರೀ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಸೆಲ್‌ಸ್ಟೋನ್, ತಹ್ಲಿಯಾ ಮೆಕ್‌ಗ್ರಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.