ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ಸುಲಭ ಜಯ ಡೆಹ್ರಾಡೂನ್‌: ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಕರ್ನಾಟಕ ತಂಡ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಮಧ್ಯಪ್ರದೇಶ ತಂಡವನ್ನು ಮಣಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಧ್ಯಪ್ರದೇಶ ತಂಡವನ್ನು ಕರ್ನಾಟಕದ ಬೌಲರ್‌ಗಳು 17.4 ಓವರ್‌ಗಳಲ್ಲಿ 76 ರನ್‌ಗಳಿಗೆ ನಿಯಂತ್ರಿಸಿದರು. ವೈಶಾಖ್‌ ವಿಜಯಕುಮಾರ್‌ (16ಕ್ಕೆ 3) ಮತ್ತು ಕೆ.ಗೌತಮ್‌ (17ಕ್ಕೆ 3) ತಲಾ ಮೂರು ವಿಕೆಟ್‌ ಪಡೆದು ಗಮನ ಸೆಳೆದರೆ, ವಿದ್ವತ್‌ ಕಾವೇರಪ್ಪ 2 ವಿಕೆಟ್‌ ಗಳಿಸಿದರು. ಕರ್ನಾಟಕ ತಂಡ 16 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ದೇವದತ್ತ ಪಡಿಕ್ಕಲ್‌ ಮತ್ತು ನಾಯಕ ಮಯಂಕ್‌ ಅಗರವಾಲ್‌ ಅವರು ಮೊದಲ ವಿಕೆಟ್‌ಗೆ 52 ರನ್‌ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಸಂಕ್ಷಿಪ್ತ ಸ್ಕೋರ್‌: ಮಧ್ಯಪ್ರದೇಶ 17.4 ಓವರ್‌ಗಳಲ್ಲಿ 76 (ಶುಭಂ ಶರ್ಮಾ 24, ವಿದ್ವತ್‌ ಕಾವೇರಪ್ಪ 11ಕ್ಕೆ 2, ವೈಶಾಖ್‌ ವಿಜಯಕುಮಾರ್‌ 16ಕ್ಕೆ 3, ಕೆ.ಗೌತಮ್‌ 17ಕ್ಕೆ 3, ಪ್ರಸಿದ್ಧ ಕೃಷ್ಣ 15ಕ್ಕೆ 1, ಶುಭಾಂಗ್‌ ಹೆಗ್ಡೆ 16ಕ್ಕೆ 1) ಕರ್ನಾಟಕ 16 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 77 (ದೇವದತ್ತ ಪಡಿಕ್ಕಲ್‌ 24, ಮಯಂಕ್ ಅಗರವಾಲ್‌ 26, ಕೆ.ಶ್ರೀಜಿತ್‌ ಔಟಾಗದೆ 13, ಮನೀಷ್‌ ಪಾಂಡೆ 11, ಆವೇಶ್‌ ಖಾನ್‌ 17ಕ್ಕೆ 1) ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.