: ಇಸ್ರೇಲ್‌ ಜನರಿಗೆ ತನ್ನ ಗೆಲುವು ಅರ್ಪಣೆ ಎಂದು ಸಿರಾಜ್‌ ಹೇಳಿಲ್ಲ ‘ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಗೆಲುವನ್ನು ನಾನು ಇಸ್ರೇಲ್‌ನ ಸೋದರ ಸೋದರಿಯರಿಗೆ ಅರ್ಪಿಸುತ್ತೇನೆ’ ಎಂದು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್‌ ಹೇಳಿದ್ದಾರೆ ಎನ್ನಲಾದ ‘ಎಕ್ಸ್‌’ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಗೆಲುವನ್ನು ನಾನು ಇಸ್ರೇಲ್‌ನ ಸೋದರ ಸೋದರಿಯರಿಗೆ ಅರ್ಪಿಸುತ್ತೇನೆ’ ಎಂದು ಅಫ್ಗನ್‌ ಕ್ರಿಕೆಟಿಗ ರಶೀದ್ ಖಾನ್‌ ಸಹ ಮಾಡಿದ್ದಾರೆ ಎನ್ನಲಾದ ‘ಎಕ್ಸ್‌’ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನೋಡಿ ಮುಸ್ಲಿಮರೂ ಇಸ್ರೇಲ್‌ ಅನ್ನೇ ಬೆಂಬಲಿಸುತ್ತಿದ್ದಾರೆ’ ಎಂಬ ಬರಹದೊಂದಿಗೆ ಈ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇವು, ನಕಲಿ ಖಾತೆಗಳಿಂದ ಮಾಡಿರುವ ‘ಎಕ್ಸ್‌‍’ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು. ‘@ ಎಂಬ ಹ್ಯಾಂಡಲ್‌ನಿಂದ ಸಿರಾಜ್ ಅವರದ್ದು ಎನ್ನಲಾದ ಪೋಸ್ಟ್‌ ಮಾಡಲಾಗಿದೆ. ಆದರೆ ಸಿರಾಜ್ ಅವರ ಅಧಿಕೃತ ಖಾತೆಯ ಹ್ಯಾಂಡಲ್‌ ಹೆಸರು @. ಹೀಗಾಗಿ ಸಿರಾಜ್ ಅವರು ಇಂತಹ ಪೋಸ್ಟ್‌ ಮಾಡಿದ್ದಾರೆ ಎಂಬುದು ಸುಳ್ಳು. ಜತೆಗೆ ರಶೀದ್‌ ಖಾನ್‌ ಅವರೂ ಅಂತಹ ‘ಎಕ್ಸ್‌’ ಪೋಸ್ಟ್‌ ಮಾಡಿಲ್ಲ. ಈ ಇಬ್ಬರ ಹೆಸರಿನಲ್ಲಿ ಒಬ್ಬನೇ ವ್ಯಕ್ತಿ ಹೆಸರು ಮತ್ತು ಹ್ಯಾಂಡಲ್‌ ಬದಲಿಸಿ ಅಂತಹ ‘ಎಕ್ಸ್‌’ ಪೋಸ್ಟ್‌ ಮಾಡಿದ್ದಾನೆ’ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.