| ದ.ಆಫ್ರಿಕಾ ತಂಡಕ್ಕೆ ಬವುಮಾ ಅಲಭ್ಯ; ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮುಂಬೈ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಇಂದಿನ ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಎದುರು ಬೌಲಿಂಗ್‌ ಆಯ್ದುಕೊಂಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ನಡೆಯುತ್ತಿದೆ. ‌ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಅಮೋಘ ಆರಂಭ ಕಂಡಿರುವ ದಕ್ಷಿಣ ಆಫ್ರಿಕಾ, ಕಳೆದ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಮುಗ್ಗರಿಸಿತ್ತು. ಮೊದಲ ಪಂದ್ಯದಲ್ಲಿ ಸೋತು ನಂತರ ಪುಟಿದೆದ್ದಿದ್ದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಮತ್ತೆ ಅಘ್ಗಾನಿಸ್ತಾನ ಎದುರು ಪರಾಭವಗೊಂಡಿತ್ತು. ಹೀಗಾಗಿ ಕಳೆದ ಪಂದ್ಯದ ಅನಿರೀಕ್ಷಿತ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿರುವ ಉಭಯ ತಂಡಗಳು, ಈ ಪಂದ್ಯದಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೇಲೇರುವ ಗುರಿಹೊಂದಿವೆ. ಅನಾರೋಗ್ಯದಿಂದಾಗಿ ದಕ್ಷಿಣಾ ಆಫ್ರಿಕಾ ನಾಯಕ ತೆಂಬಾ ಬವುಮಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲು ಏಡನ್‌ ಮರ್ಕರಮ್‌ ತಂಡ ಮುನ್ನಡೆಸಲಿದ್ದಾರೆ. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ತಂಡ ಕೂಡಿಕೊಂಡಿದ್ದಾರೆ. ಈ ತಂಡಗಳು ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಏಳು ಸಲ ಮುಖಾಮುಖಿಯಾಗಿವೆ. ಈ ಪೈಕಿ ಇಂಗ್ಲೆಂಡ್‌ 4ರಲ್ಲಿ ಮತ್ತು ದಕ್ಷಿಣ ಆಫ್ರಕಾ 3ರಲ್ಲಿ ಜಯ ಸಾಧಿಸಿದೆ. ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ 69 ಸಲ ಹಣಾಹಣಿ ನಡೆಸಿವೆ. ದಕ್ಷಿಣ ಆಫ್ರಿಕಾ 33 ರಲ್ಲಿ ಹಾಗೂ ಇಂಗ್ಲೆಂಡ್‌ 30 ರಲ್ಲಿ ಗೆದ್ದಿವೆ. ಒಂದು ಪಂದ್ಯ ಟೈ ಆಗಿದ್ದು, ಐದು ಪಂದ್ಯಗಳು ರದ್ದುಗೊಂಡಿವೆ. ಆಡುವ ಹನ್ನೊಂದರ ಬಳಗ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.