2023: ನೆದರ್ಲೆಂಡ್ಸ್‌ಗೆ ಸೋಲು; ಮೊದಲ ಗೆಲುವು ದಾಖಲಿಸಿದ ಶ್ರೀಲಂಕಾ ಲಖನೌ: ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದ ಶ್ರೀಲಂಕಾ ಕೊನೆಗೂ ಮೊದಲ ಗೆಲುವು ದಾಖಲಿಸಿದೆ. ಲಖನೌದ ಎಕಾನ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾಗೆ ಸೋಲಿನ ಆಘಾತ ನೀಡಿದ್ದ ನೆದರ್ಲೆಂಡ್ಸ್‌ಗೆ ಲಂಕಾ ವಿರುದ್ಧವೂ ಮತ್ತದೇ ಸಾಧನೆ ಪುನರಾವರ್ತಿಸಲು ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 49.4 ಓವರ್‌ಗಳಲ್ಲಿ 262 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪಂದ್ಯದ ಒಂದು ಹಂತದಲ್ಲಿ ನೆದರ್ಲೆಂಡ್ಸ್ 91ಕ್ಕೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಳ ಕ್ರಮಾಂಕದಲ್ಲಿ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (70) ಹಾಗೂ ವ್ಯಾನ್ ಬೀಕ್ (59) ಆಕರ್ಷಕ ಅರ್ಧಶತಕಗಳನ್ನು ಗಳಿಸುವ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು. ಲಂಕಾ ಪರ ದಿಲ್ಶಾನ್ ಮಧುಶಂಕಾ ಮತ್ತು ರಜಿತ ತಲಾ ನಾಲ್ಕು ವಿಕೆಟ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಲಂಕಾ 48.2 ಓವರ್‌ಗಳಲ್ಲಿ ಗೆಲುವು ದಾಖಲಿಸಿತು. ಸದೀರ ಸಮರವಿಕ್ರಮ (91*), ಪಥುಮ್ ನಿಸ್ಸಾಂಕ (54), ಚರಿತ ಅಸಲಂಕಾ (41) ಹಾಗೂ ಧನಂಜಯ ಡಿಸಿಲ್ವಾ (30) ಉಪಯುಕ್ತ ಇನಿಂಗ್ಸ್ ಕಟ್ಟಿದರು. ನೆದರ್ಲೆಂಡ್ಸ್ ಪರ ಆರ್ಯನ್ ದತ್ ಮೂರು ವಿಕೆಟ್ ಗಳಿಸಿದರು. #CWC23 👏# ../90cTAEFp7L ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.