: ಲಂಕಾ ವಿರುದ್ಧ ಟಾಸ್‌ ಗೆದ್ದ ನೆದರ್ಲೆಂಡ್ಸ್‌ ಬ್ಯಾಟಿಂಗ್ ಆಯ್ಕೆ ಧರ್ಮಶಾಲಾ: ಪ್ರಬಲ ದಕ್ಷಿಣ ಆಫ್ರಿಕಾ ತಂಡಕ್ಕೆ ಅನಿರೀಕ್ಷಿತ ಆಘಾತ ನೀಡಿದ ಉತ್ಸಾಹದಲ್ಲಿರುವ ನೆದರ್ಲೆಂಡ್ಸ್‌ ತಂಡ ವಿಶ್ವಕಪ್‌ ಪಂದ್ಯದಲ್ಲಿ ಇಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಟಾಸ್‌ ಗೆದ್ದ ನೆದರ್ಲೆಂಡ್ಸ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ. ಆಡಿರುವ ಮೂರೂ ಪಂದ್ಯಗಳಲ್ಲಿ ಸೋಲುಂಡಿರುವ ಲಂಕನ್ನರು ಮೊದಲ ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ. ://./skDRqJ3yeo | # | #CWC23 ../EolCF4ULkD ಧರ್ಮಶಾಲಾದಲ್ಲಿ ಕಳೆದ ಮಂಗಳವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ನೆದರ್ಲೆಂಡ್ಸ್ ತಂಡ ಟೆಸ್ಟ್‌ ತಂಡವೊಂದರ ಎದುರು ಏಕದಿನ ಮಾದರಿಯಲ್ಲಿ ಮೊದಲ ಗೆಲುವು ದಾಖಲಿಸಿತ್ತು. ಇದು ತಂಡದ ನೈತಿಕ ಸ್ಥೈರ್ಯ ಹೆಚ್ಚಿಸಿದ್ದು, ಈಗ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ವಿಕ್ರಮಜಿತ್‌ ಸಿಂಗ್‌, ಮ್ಯಾಕ್ಸ್ ಒ ಡೌಡ್ ಮತ್ತು ಕಾಲಿನ್ ಆ್ಯಕರ್‌ಮನ್, ಆಲ್‌ರೌಂಡರ್ ಬಾಸ್ ಡಿ ಲೀಡೆ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನೊಂದೆಡೆ ಶ್ರೀಲಂಕಾಕ್ಕೆ ಬೌಲಿಂಗ್‌ ವಿಭಾಗದಲ್ಲಿ ಸಮಸ್ಯೆ ಎದುರಾಗಿದೆ. ಏಳು ವಿಕೆಟ್‌ ಪಡೆದಿರುವ ವೇಗಿ ದಿಲ್ಶನ್ ಮಧುಶಂಕ ಅವರೇ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.