ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸಲಿ: ದಸರಾ ಹಬ್ಬಕ್ಕೆ ಶುಭ ಕೋರಿದ ಸಚಿನ್‌ ಮುಂಬೈ: ಭಾರತ ಕ್ರಿಕೆಟ್‌ನ ಜೀವಂತ ದಂತಕಥೆ ಎಂದೇ ಖ್ಯಾತಿ ಪಡೆದಿರುವ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೊಲ್ಕರ್‌ ಅವರು ವಿಜಯ ದಶಮಿಯ ಪ್ರಯುಕ್ತ ಇಂದು( ಮಂಗಳವಾರ ) ಶುಭಾಶಯ ಕೋರಿದ್ದಾರೆ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.. ಚೆಂಡು ಬೌಂಡರಿಯನ್ನು ದಾಟಿದಂತೆ, ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸಲಿ. ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿ, ಸರಿಯಾದ ಕಾರಣಕ್ಕೆ ಮತ್ತು ಉತ್ತಮ ವಿಷಯಗಳ ಪರ ಬ್ಯಾಟಿಂಗ್‌ ಮುಂದುವರಿಸಿ ಎಂದು ಬರೆದುಕೊಂಡಿದ್ದಾರೆ. # ! 🏏 , . . ! # ../ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರಿಕೆಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು‘ರಾಷ್ಟ್ರೀಯ ಐಕಾನ್‌’ ಆಗಿ ಚುನಾವಣಾ ಆಯೋಗವು ನೇಮಕ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.