‌ಬಿಸಿಸಿಐ ಮಹಿಳೆಯರ ಟಿ20 ಟ್ರೋಫಿ ಟೂರ್ನಿ: ಕರ್ನಾಟಕಕ್ಕೆ ಜಯ ಬೆಂಗಳೂರು: ವೃಂದಾ ದಿನೇಶ್ ಅವರ ಅರ್ಧಶತಕ ಹಾಗೂ ಬೌಲರ್‌ಗಳ ಅಮೋಘ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯಲ್ಲಿ 115 ರನ್‌ಗಳಿಂದ ಪಾಂಡಿಚೇರಿ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 173 ರನ್‌ ಗಳಿಸಿತು. ವೃಂದಾ (67, 34ಎ) ಮತ್ತು ಜಿ.ಆರ್‌. ಪ್ರೇರಣಾ (34) ಉಪಯುಕ್ತ ಕಾಣಿಕೆ ನೀಡಿದರು. ಸವಾಲಿನ ರನ್‌ ಬೆನ್ನತ್ತಿದ ಪಾಂಡಿಚೇರಿ ತಂಡವು 13.2 ಓವರ್‌ಗಳಲ್ಲಿ 58 ರನ್‌ಗೆ ಕುಸಿಯಿತು. ಪಿ. ರೋಹಿತಾ ಚೌಧರಿ, ಶ್ರೇಯಾಂಕಾ ಆರ್‌. ಪಾಟೀಲ ಮತ್ತು ಪ್ರತ್ಯೂಷಾ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು. ಸಂಕ್ಷಿಪ್ತ ಸ್ಕೋರ್‌ ಕರ್ನಾಟಕ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 173 (ಜಿ.ಆರ್. ಪ್ರೇರಣಾ 34, ವೃಂದಾ ದಿನೇಶ್‌ 67, ದಿವ್ಯಾ ಜ್ಞಾನಾನಂದ 26; ಆರ್. ಅಭಿರಾಮೆ 42ಕ್ಕೆ 2, ಎಸ್‌.ಎ. ಲೋಂಕರ್ 16ಕ್ಕೆ 2, ದಿವ್ಯಾ ಷಣ್ಮುಗಂ 26ಕ್ಕೆ 2) ಪಾಂಡಿಚೇರಿ: 13.2 ಓವರ್‌ಗಳಲ್ಲಿ 58 (ಪಿ.ರೋಹಿತಾ ಚೌಧರಿ 30ಕ್ಕೆ 2, ಶ್ರೇಯಾಂಕಾ ಆರ್. ಪಾಟೀಲ 4ಕ್ಕೆ 2, ಸಿ. ಪ್ರತ್ಯೂಷಾ 12ಕ್ಕೆ 2). ಫಲಿತಾಂಶ: ಕರ್ನಾಟಕ ತಂಡಕ್ಕೆ 115 ರನ್‌ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.