ಆಸ್ಟ್ರೇಲಿಯಾ ವಿರುದ್ಧ ಟಿ–20 ಸರಣಿ: ಲಕ್ಷ್ಮಣ್‌ಗೆ ಹೊಣೆ ನವದೆಹಲಿ: ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ವಿ.ವಿ.ಎಸ್‌.ಲಕ್ಷ್ಮಣ್ ಅವರು, ಏಕದಿನ ವಿಶ್ವಕಪ್ ನಂತರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಟಿ–20 ಪಂದ್ಯಗಳ ಸರಣಿಗೆ ಭಾರತ ತಂಡದ ತರಬೇತುದಾರನಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ವಿಶ್ವ ಕಪ್‌ ಮುಗಿದ ಒಂದೇ ವಾರದಲ್ಲಿ ಈ ಸರಣಿ ಆರಂಭವಾಗಲಿದೆ. ‌ಈಗ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್‌ ದ್ರಾವಿಡ್ ಅವರ ಒಪ್ಪಂದ ವಿಶ್ವಕಪ್‌ವರೆಗೆ ಇರಲಿದೆ. ಅವರಿಗೆ ಮತ್ತೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡುವ ಆಯ್ಕೆ ಬಿಸಿಸಿಐ ಮುಂದಿದೆ. ನಿಯಮಗಳ ಪ್ರಕಾರ ಮಂಡಳಿಯು ಕೋಚ್‌ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಬೇಕಾಗುತ್ತದೆ. ‌51 ವರ್ಷದ ದ್ರಾವಿಡ್ ಅವರು ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ತೋರುತ್ತಾರೆಯೇ ಎಂಬುದು ಕುತೂಹಲಕರ. ಅವರು ಐಪಿಎಲ್‌ ತಂಡವೊಂದಕ್ಕೆ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಆದರೆ ಸೂರ್ಯಕುಮಾರ್ ಯಾದವ್ ಅವರನ್ನುಳಿದು ದ್ರಾವಿಡ್‌ ಸೇರಿದಂತೆ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಎನ್ನಲಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.