'ಧೋನಿ ರಿವ್ಯೂ ಸಿಸ್ಟಂ' ಈಗ 'ಡಿಸಿಷನ್ ರಾಹುಲ್ ಸಿಸ್ಟಂ'; ಕನ್ನಡಿಗನಿಗೆ ಬಹುಪರಾಕ್ ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ದ ನಡೆದ ಪಂದ್ಯದಲ್ಲಿ ನಿಖರ ಡಿಆರ್‌ಎಸ್ ಮೂಲಕ ವಿಕೆಟ್ ಪಡೆಯಲು ನೆರವಾದ ಟೀಮ್ ಇಂಡಿಯಾದ ವಿಕೆಟ್ ಕೀಪರ್, ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಕುರಿತು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಅವರನ್ನು ಕೊಂಡಾಡಿದ್ದಾರೆ. ಭಾರತ ಒಡ್ಡಿದ 358 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 55 ರನ್ನಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 302 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಲಂಕಾ ಇನಿಂಗ್ಸ್ ವೇಳೆ ಮೊಹಮ್ಮದ್ ಶಮಿ ಎಸೆತದಲ್ಲಿ ಬ್ಯಾಟರ್ ದುಶ್ಮಂತ ಚಮೀರ ವಿಕೆಟ್ ಪಡೆಯುವಲ್ಲಿ ರಾಹುಲ್ ಜಾಣತನವು ನೆರವಾಯಿತು. . ../570BgcOoXK ಮೊದಲ ನೋಟದಲ್ಲಿ ಚೆಂಡು ವೈಡ್ ಎಂಬಂತೆ ಭಾಸವಾಗುತ್ತಿತ್ತು. ಅಂಪೈರ್ ಕೂಡ ವೈಡ್ ಎಂದು ನಿರ್ಣಯ ನೀಡಿದ್ದರು. ಆ ಎಸೆತವನ್ನು ತನ್ನ ಎಡಬದಿಗೆ ಡೈವ್ ಹೊಡೆದ ರಾಹುಲ್ ಅದ್ಭುತ ಕ್ಯಾಚ್ ಪಡೆದರು. ಬಳಿಕ ಡಿಆರ್‌ಎಸ್ ಮನವಿ ಮಾಡುವಂತೆ ನಾಯಕ ರೋಹಿತ್ ಶರ್ಮಾ ಅವರನ್ನು ಒತ್ತಾಯಿಸಿದರು. ರಾಹುಲ್ ಹೊರತುಪಡಿಸಿ ಟೀಮ್ ಇಂಡಿಯಾದ ಇತರೆಲ್ಲ ಆಟಗಾರರಿಗೆ ಈ ಬಗ್ಗೆ ಖಚಿತತೆ ಇರಲಿಲ್ಲ. ಕೊನೆಗೂ ರಾಹುಲ್ ಬೇಡಿಕೆಗೆ ಓಗೊಟ್ಟು ನಾಯಕ ರೋಹಿತ್ ಶರ್ಮಾ ಡಿಆರ್‌ಎಸ್ ಮನವಿ ಮಾಡಲು ನಿರ್ಧರಿಸಿದರು. ಬಳಿಕ ರೀಪ್ಲೆ ಪರೀಶೀಲಿಸಿದ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು. ಈ ವೇಳೆ ಟೀಮ್ ಇಂಡಿಯಾದ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. . 🤩 & . , . ❤️ # ../qGSkIqDS07 😂😂😂😂😂❤️❤️ ../DRvwf5dtkF ⚡🔥💥 , . ' # ../gBiC6ZMzZ6 . . ' . ../TNUmCvX9F5 , . - . ../Uaom3dUHj6 . . # ../ , ' ' , . ../kPS8acBQkZ ../fB9A76a23G ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.