ಆರ್ಚರಿ: ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ 2ನೇ ಸ್ಥಾನ ಬ್ಯಾಂಕಾಕ್‌: ಧೀರಜ್ ಬೊಮ್ಮದೇವರ ಮತ್ತು ತರುಣ್‌ದೀಪ್‌ ರಾಜ್‌ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ, ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನ ಪುರುಷರ ರಿಕರ್ವ್‌ ತಂಡ ವಿಭಾಗದ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸಿತು. ಶ್ರೇಯಾಂಕ ನಿಗದಿಪಡಿಸಲು ಭಾನುವಾರ ನಡೆದ ಸ್ಪರ್ಧೆಯಲ್ಲಿ ಭಾರತ ತಂಡ ಒಟ್ಟು 2,027 ಪಾಯಿಂಟ್ಸ್ ಗಳಿಸಿತು. 2,061 ಪಾಯಿಂಟ್ಸ್‌ ಕಲೆಹಾಕಿದ ಕೊರಿಯಾ ತಂಡ ಅಗ್ರಸ್ಥಾನ ಪಡೆಯಿತು. ಧೀರಜ್‌ ಅವರು 682 ಪಾಯಿಂಟ್ಸ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ತರುಣ್‌ದೀಪ್‌ ಆರನೇ ಸ್ಥಾನದಲ್ಲಿ ಕಾಣಿಸಿಕೊಂಡರು. ವೈಯಕ್ತಿಕ ವಿಭಾಗದ ಮೊದಲ ಮೂರು ಸ್ಥಾನಗಳನ್ನು ಕೊರಿಯಾ ಸ್ಪರ್ಧಿಗಳು ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಯನ್ನು ಮಳೆಯ ಕಾರಣ ಅರ್ಧದಲ್ಲೇ ಮೊಟಕುಗೊಳಿಸಲಾಗಿದ್ದು, ಸೋಮವಾರ ಮುಂದುವರಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.