ಬಿಸಿಸಿಐ 23 ವರ್ಷದೊಳಗಿನವರ ಏಕದಿನ ಟ್ರೋಫಿ ಕ್ರಿಕೆಟ್‌: ಸೆಮಿಗೆ ಕರ್ನಾಟಕ ತಂಡ ಬೆಂಗಳೂರು: ಮೆಕ್‌ನೀಲ್‌ ಹ್ಯಾಡ್ಲಿ ನೊರೋನಾ (60 ರನ್‌ ಹಾಗೂ 33ಕ್ಕೆ 2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಕರ್ನಾಟಕ ತಂಡದವರು ಬಿಸಿಸಿಐ 23 ವರ್ಷದೊಳಗಿನವರ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ರಾಜ್ಯ ತಂಡ 7 ವಿಕೆಟ್‌ಗಳಿಂದ ಮುಂಬೈ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಎದುರಾಳಿಗಳನ್ನು 257 ರನ್‌ಗಳಿಗೆ ಆಲೌಟ್‌ ಮಾಡಿದ ಕರ್ನಾಟಕ, 39.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಮೆಕ್‌ನೀಲ್‌ ಅಲ್ಲದೆ ಕೆ.ವಿ.ಅನೀಶ್ (75) ಮತ್ತು ಅನೀಶ್ವರ್‌ ಗೌತಮ್ (69) ಅವರು ಅರ್ಧಶತಕ ಗಳಿಸಿ ಗಮನ ಸೆಳೆದರು. ಪಾಲಂನ ಏರ್‌ಫೋರ್ಸ್‌ ಮೈದಾನದಲ್ಲಿ ನ.21 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ಉತ್ತರಾಖಂಡ ವಿರುದ್ಧ ಪೈಪೋಟಿ ನಡೆಸಲಿದೆ. ಸಂಕ್ಷಿಪ್ತ ಸ್ಕೋರ್‌: ಮುಂಬೈ 48.2 ಓವರ್‌ಗಳಲ್ಲಿ 257 (ಸುವೇದ್‌ ಪಾರ್ಕರ್ 40, ದಿವ್ಯಾನ್ಶ್‌ 74, ಮೊಹ್ಸಿನ್‌ ಖಾನ್ ಖಾನ್ 44ಕ್ಕೆ 3, ಮೆಕ್‌ನೀಲ್‌ ಹ್ಯಾಡ್ಲಿ ನೊರೋನಾ 33ಕ್ಕೆ 2, ಯಶೋವರ್ಧನ್‌ ಪರಂತಪ್ 37ಕ್ಕೆ 2) ಕರ್ನಾಟಕ 39.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 263 (ಮೆಕ್‌ನೀಲ್‌ 60, ಕೆ.ವಿ.ಅನೀಶ್ 75, ಅನೀಶ್ವರ್‌ ಗೌತಮ್ 69) ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.