ಟಿ20 ಕ್ರಿಕೆಟ್‌ ವಿಶ್ವಕಪ್‌: ನಮೀಬಿಯಾ ಅರ್ಹತೆ ದುಬೈ: ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ನಮೀಬಿಯಾ ತಂಡ ಅರ್ಹತೆ ಪಡೆದಿದೆ. ಆಫ್ರಿಕಾ ವಲಯದ ಕ್ವಾಲಿಫೈಯರ್ ಕೂಟದಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದ ನಮೀಬಿಯಾ ತಂಡವು 10 ಅಂಕಗಳೊಂದಿಗೆ ಮುಖ್ಯ ಕೂಟಕ್ಕೆ ಪ್ರವೇಶ ಪಡೆಯಿತು. ಟಿ20 ವಿಶ್ವಕಪ್ ಮುಂದಿನ ವರ್ಷ ಜೂನ್ 4ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.