| ಕರ್ನಾಟಕದ ವೃಂದಾ, ಪಂಜಾಬ್‌ನ ಕಶ್ವೀ ದಾಖಲೆ ಮೊತ್ತಕ್ಕೆ ಹರಾಜು ಮುಂಬೈ: ಪಂಜಾಬ್‌ನ ವೇಗದ ಬೌಲರ್‌ ಕಶ್ವೀ ಗೌತಮ್ ಅವರು ಶನಿವಾರ ನಡೆದ ಮಹಿಳಾ ಕ್ರಿಕೆಟ್‌ ಲೀಗ್‌ನ ಹರಾಜಿನಲ್ಲಿ ಎರಡು ಕೋಟಿ ರೂಪಾಯಿ ಮೊತ್ತಕ್ಕೆ ಗುಜರಾತ್‌ ಜೈಂಟ್ಸ್‌ ತಂಡದ ಪಾಲಾಗಿದ್ದಾರೆ. 22 ವರ್ಷದ ಕರ್ನಾಟಕದ ಆಟಗಾರ್ತಿ ವೃಂದಾ ದಿನೇಶ್ ಕೂಡ ಬಿಡ್ಡಿಂಗ್‌ನಲ್ಲಿ ಬಂಪರ್‌ ಮೌಲ್ಯ ಪಡೆದರು. ಅವರನ್ನು ₹1.3 ಕೋಟಿಗೆ ಯುಪಿ ವಾರಿಯರ್ಸ್‌ ತಂಡ ಪಡೆಯಿತು. ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯ ಬಿಡ್ಡಿಂಗ್‌ನಲ್ಲಿ 20 ವರ್ಷದ ಆಟಗಾರ್ತಿ ಕಶ್ವಿ ಅವರ ಮೂಲ ಮೌಲ್ಯ ₹10 ಎಂದು ನಿಗದಿಪಡಿಸಲಾಗಿತ್ತು. ಜೈಂಟ್ಸ್‌ ಜೊತೆಗೆ ಯುಪಿ ವಾರಿಯರ್ಸ್‌ ಕೂಡ ಕಶ್ವಿ ಅವರನ್ನು ತಂಡಕ್ಕೆ ಪಡೆಯಲು ಪ್ರಯತ್ನಿದವು. 22 ವರ್ಷದ ಕರ್ನಾಟಕ ಆಟಗಾರ್ತಿ ವೃಂದಾ ಇನ್ನೂ ರಾಷ್ಟ್ರೀಯ ತಂಡದಲ್ಲಿ ಆಡಿಲ್ಲ. ಆದರೆ ಅವರು ಮತ್ತು ಕಶ್ವೀ ಭಾರತ ‘ಎ’ ತಂಡದ ಪರ, ಇಂಗ್ಲೆಂಡ್‌ ‘ಎ’ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಆಡಿದ್ದರು. ಬಿಡ್ಡಿಂಗ್‌ನ ಆರಂಭದಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿಯರಾದ ಅನ್ನಾಬೆಲ್ ಸುದರ್‌ಲ್ಯಾಂಡ್ ಅವರು ಎರಡು ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾದರು. ಉದ್ಘಾಟನಾ ಆವೃತ್ತಿಯಲ್ಲಿ ಸುದರ್‌ಲ್ಯಾಂಡ್‌ ಜೈಂಟ್ಸ್‌ ಪರ ಆಡಿದ್ದರು. ಆದರೆ ಲೀಗ್‌ ನಂತರ ಅವರನ್ನು ಉಳಿಸಿಕೊಳ್ಳಲಿಲ್ಲ. 20 ವರ್ಷದ ಎಡಗೈ ಬ್ಯಾಟರ್‌ ಫೋಬಿ ಲಿಚ್‌ಫೀಲ್ಡ್‌ ಅವರನ್ನು ಒಂದು ಕೋಟಿ ಕೊಟ್ಟು ಗುಜರಾತ್ ಜೈಂಟ್ಸ್, ತಂಡಕ್ಕೆ ಸೇರಿಸಿಕೊಂಡಿತು. ಇವರೂ ಆಸ್ಟ್ರೇಲಿಯಾದವರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸ್ಟ್ರೇಲಿಯಾದ ಜಾರ್ಜಿಯಾ ವಾರ್ಹ್ಯಾಮ್ ಅವರನ್ನು (₹40 ಲಕ್ಷ) ಮತ್ತು ಇಂಗ್ಲೆಂಡ್‌ನ ಕೇಟ್‌ ಕ್ರಾಸ್‌ (₹30 ಲಕ್ಷ) ಅವರನ್ನು ಬಿಡ್‌ನಲ್ಲಿ ಪಡೆಯಿತು. 37 ವರ್ಷದ ಸ್ಪಿನ್ನರ್ ಏಕ್ತಾ ಬಿಷ್ಠ್ ಅವರನ್ನೂ ಮೂಲಬೆಲೆಗಿಂತ ಎರಡು ಪಟ್ಟು ಹೆಚ್ಚು ನೀಡಿ (₹40 ಲಕ್ಷ) ಆರ್‌ಬಿಸಿ ಪಡೆಯಿತು. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಶಬ್ನಮ್ ಇಸ್ಮಾಯಿಲ್ ಅವರು ಮೂಲಬೆಲೆಗಿಂತ ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಮುಂಬೈ ತಂಡದ ಪಾಲಾದರು. ಬಿಡ್‌ ನಂತರ ಆರ್‌ಸಿಬಿ ತಂಡ ಉಳಿಸಿಕೊಂಡ ಆಟಗಾರ್ತಿಯರು: ಸ್ಮೃತಿ ಮಂದಾನಾ , ಆಶಾ ಶೋಭನಾ, ದಿಶಾ ಕಸತ್, ಎಲಿಸಿ ಪೆರಿ, ಹೀದರ್ ನೈಟ್‌, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್‌, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್. ಬಿಡ್‌ನಲ್ಲಿ ಪಡೆದವರು: ಜಾರ್ಜಿಯಾ ವಾರ್ಹೆಮ್ (ಬಿಡ್‌ನಲ್ಲಿ ಪಡೆದ ಮೊತ್ತ ₹40 ಲಕ್ಷ), ಕೇಟ್‌ ಕ್ರಾಸ್‌ (₹30 ಲಕ್ಷ), ಏಕ್ತಾ ಬಿಷ್ಠ್ (₹60 ಲಕ್ಷ), ಶುಭಾ ಸತೀಶ್ (₹10ಲಕ್ಷ), ಎಸ್‌.ಮೇಘನಾ (₹30ಲಕ್ಷ), ಸಿಮ್ರಾನ್ ಬಹಾದೂರ್ (₹30ಲಕ್ಷ), ಸೋಫಿ ಮೊಲಿನೆಕ್ಸ್‌ (₹30ಲಕ್ಷ). 𝐆𝐢𝐚𝐧𝐭 🤝🏻 𝐆𝐢𝐚𝐧𝐭 ! 💪🏻 - ₹ 2Cr. 🔥# # # # ../Z4kr613yRo , . 😌# # # ../0ERz6A30I1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.