ಎರಡನೇ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ಗೆ ಜಯ ಢಾಕಾ: ಒತ್ತಡದ ಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿ ಅಜೇಯ 40 ರನ್ (48ಎ, 4x4, 1x6) ಗಳಿಸಿದ ಗ್ಲೆನ್‌ ಫಿಲಿಪ್ಸ್‌, ನ್ಯೂಜಿಲೆಂಡ್‌ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಲು ನೆರವಾದರು. ಸರಣಿ ಈಗ 1–1ರಲ್ಲಿ ಸಮನಾಗಿದೆ. ನಾಲ್ಕನೇ ದಿನವಾದ ಶನಿವಾರ ಬೆಳಿಗ್ಗೆ ಎಡಗೈ ಸ್ಪಿನ್ನರ್‌ ಎಜಾಜ್‌ ಪಟೇಲ್ (57ಕ್ಕೆ6) ದಾಳಿಗೆ ಕುಸಿದ ಆತಿಥೇಯರ ಮೊದಲ ಇನಿಂಗ್ಸ್‌ 144 ರನ್ನಿಗೆ ಕೊನೆಗೊಂಡಿತ್ತು. ಗೆಲುವಿಗೆ 137 ರನ್‌ಗಳ ಗುರಿ ಎದುರಿಸಿದ ಪ್ರವಾಸಿ ನ್ಯೂಜಿಲೆಂಡ್‌ ಟೀ ನಂತರ 6 ವಿಕೆಟ್‌ಗೆ 139 ರನ್‌ ಬಾರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅತ್ಯಮೂಲ್ಯ 87 ರನ್ ಬಾರಿಸಿದ್ದ ಫಿಲಿಪ್ಸ್‌, ಎರಡನೇ ಸರದಿಯಲ್ಲೂ ಉಪಯಕ್ತ ಕಾಣಿಕೆ ನೀಡಿದ ‘ಪಂದ್ಯದ ಪುರುಷೋತ್ತಮ’ರಾದರು. ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ (ಔಟಾಗದೇ 35) ಜೊತೆಗೆ ಮುರಿಯದ ಏಳನೇ ವಿಕೆಟ್‌ಗೆ 70 ರನ್ ಸೇರಿಸಿದರು. ಒಂದು ಹಂತದಲ್ಲಿ ಪ್ರವಾಸಿಗರು 6 ವಿಕೆಟ್‌ಗೆ 69 ರನ್ ಗಳಿಸಿ ಸಂಕಟಕ್ಕೆ ಸಿಲುಕಿದ್ದರು. ಸಿಲ್ಹೆಟ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ 150 ರನ್‌ಗಳಿಂದ ಜಯಗಳಿಸಿತ್ತು. ಸ್ಕೋರುಗಳು ಬಾಂಗ್ಲಾದೇಶ: 172 ಮತ್ತು 35 ಓವರುಗಳಲ್ಲಿ 144 (ಝಾಕಿರ್‌ ಹುಸೇನ್ 59; ಎಜಾಜ್ ಪಟೇಲ್ 57ಕ್ಕೆ6, ಮಿಚೆಲ್ ಸ್ಯಾಂಟ್ನರ್ 51ಕ್ಕೆ3) ನ್ಯೂಜಿಲೆಂಡ್‌: 180 ಮತ್ತು 6 ವಿಕೆಟ್‌ಗೆ 139 (ಗ್ಲೆನ್‌ ಫಿಲಿಪ್ಸ್‌ ಔಟಾಗದೇ 40, ಸ್ಯಾಂಟ್ನರ್ ಔಟಾಗದೇ 35; ಮೆಹದಿ ಹಸನ್ ಮಿರಾಜ್ 52ಕ್ಕೆ3, ತೈಜುಲ್ ಇಸ್ಲಾಂ 58ಕ್ಕೆ2). - 🔥 , # .#WTC25 📝: ://./8MYlT6C8vL ../iMnzK7KKYH ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.