T20I ಫೈನಲ್: ಭಾರತ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಪೆಲ್ಲೆಕೆಲೆ: ಟಿ20 ಸರಣಿಯ ಮೂರನೆಯ ಮತ್ತು ಕೊನೆಯ ಪಂದ್ಯ ಇಂದು ನಡೆಯುತ್ತಿದೆ. ಭಾರತದ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಹಿಂದೆ ನಡೆದ ಎರಡೂ ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತ ತಂಡವು ಪ್ರಾಬಲ್ಯ ಮುಂದುವರಿಸಿ ಸರಣಿಯನ್ನು ‘ವೈಟ್‌ ವಾಷ್‌’ ಮಾಡುವ ಗುರಿಯಲ್ಲಿದೆ. ಕೊನೆಯ ಪಂದ್ಯವನ್ನಾದರೂ ಗೆದ್ದು ಮುಖಭಂಗ ತಪ್ಪಿಸಬೇಕಾದ ಒತ್ತಡದಲ್ಲಿ ಆತಿಥೇಯ ಶ್ರೀಲಂಕಾ ತಂಡವಿದೆ. ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ. ಅರ್ಷದೀಪ್‌ ಸಿಂಗ್‌ ಮತ್ತು ಅಕ್ಸರ್‌ ಪಟೇಲ್‌ ವಿಶ್ರಾಂತಿಯಲ್ಲಿದ್ದು, ಈ ಪಂದ್ಯದಲ್ಲಿ ಆಡುತ್ತಿಲ್ಲ. ಇವರ ಬದಲು ಖಲೀಲ್‌ ಅಹಮದ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶುಭಮನ್‌ ಗಿಲ್‌ ಆಡಲಿದ್ದಾರೆ. ಭಾರತ ತಂಡ ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಸುರ್ಯಕುಮಾರ್ ಯಾದವ್‌ (ನಾಯಕ), ಸಂಜು ಸಾಮ್ಸನ್‌, ಶಿವಂ ದುಬೆ, ರಿಯಾನ್‌ ಪರಾಗ್‌. ರಿಂಕು ಸಿಂಗ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್‌, ಮೊಹಮ್ಮದ್‌ ಸಿರಾಜ್‌ ಮತ್ತು ಖಲೀಲ್‌ ಅಹಮದ್‌ ಶ್ರೀಲಂಕಾ ತಂಡ ಪಥುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಕುಸಲ್ ಪೆರೇರಾ, ಚರಿತ್ ಅಸಲಂಕ (ನಾಯಕ), ಚಮಿಂದು ವಿಕ್ರಮಸಿಂಘೆ, ಕಮಿಂದು ಮೆಂಡಿಸ್, ವನಿಂದು ಹಸರಂಗ, ಮಹೀಶ್ ತೀಕ್ಷಾನಾ, ರಮೇಶ್ ಮೆಂಡಿಸ್, ಮತೀಶ ಪತಿರಾನ, ಅಸಿತ ಫೆರ್ನಾಂಡೊ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.