ಸಾಲ್ಟ್‌ ಮಿಂಚಿನ ಶತಕ: ವೆಸ್ಟ್ ಇಂಡೀಸ್ ಎದುರು ಇಂಗ್ಲೆಂಡ್‌ಗೆ ರೋಚಕ ಜಯ ಗ್ರೆನೆಡಾ: ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ (ಔಟಾಗದೆ 109, 56ಎ, 4X4, 6X9) ಅಬ್ಬರದ ಶತಕದ ಬಲದಿಂದ ಇಂಗ್ಲೆಂಡ್ ತಂಡವು ಇಲ್ಲಿ ನಡೆದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ರೋಚಕ ಜಯ ಸಾಧಿಸಿತು. ಸೇಂಟ್ ಜಾರ್ಜ್‌ಸ್ ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದಿತು. ಮೊದಲು ಬ್ಯಾಟ್ ಮಾಡಿದ್ದ ಆತಿಥೇಯ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಎ 222 ರನ್ ಗಳಿಸಿತ್ತು. ನಿಕೊಲಸ್ ಪೂರನ್ 45 ಎಸೆತಗಳಲ್ಲಿ 82 ರನ್‌ ಗಳಿಸಿದ್ದರು. ಈ ಕಠಿಣ ಗುರಿಯನ್ನು ಇಂಗ್ಲೆಂಡ್ ತಂಡವು 19.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಸಾಲ್ಟ್ ಮತ್ತು ನಾಯಕ ಜೋಸ್ ಬಟ್ಲರ್ (51; 34ಎ, 4X5, 6X2) ಮೊದಲ ವಿಕೆಟ್ ಜೊತೆಯಾಟದಲ್ಲಿ 115 ರನ್‌ ಸೇರಿಸಿದರು. ಇದರಿಂದಾಗಿ ಇಂಗ್ಲೆಂಡ್ ಜಯಿಸಿತು. ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 222 (ನಿಕೊಲಸ್ ಪೂರನ್ 82, ಶಾಯ್ ಹೋಪ್ 26, ರೋವ್ಮನ್ ಪೊವೆಲ್ 39, ಶೆರ್ಪೆನ್ ರುದರ್‌ಫೋರ್ಡ್ 29, ಆದಿಲ್ ರಶೀದ್ 32ಕ್ಕೆ2, ಸ್ಯಾಮ್ ಕರನ್ 34ಕ್ಕೆ2) ಇಂಗ್ಲೆಂಡ್: 19.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 226 (ಫಿಲಿಪ್ ಸಾಲ್ಟ್ ಔಟಾಗದೇ 109, ಜೋಸ್ ಬಟ್ಲರ್ 51, ಲಿಯಾಮ್ ಲಿವಿಂಗ್‌ಸ್ಟೋನ್ 30, ಹ್ಯಾರಿ ಬ್ರೂಕ್ ಔಟಾಗದೆ 31, ಜೇಸನ್ ಹೋಲ್ಡರ್ 52ಕ್ಕೆ1) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಫಿಲಿಪ್ ಸಾಲ್ಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.