ಅರ್ಷದೀಪ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ; ಭಾರತಕ್ಕೆ 117ರನ್‌ಗಳ ಗೆಲುವಿನ ಗುರಿ ಜೋಹಾನ್ಸ್‌ಬರ್ಗ್: ಭಾರತದ ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಅವರ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, ಕೇವಲ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಸರ್ವಪತನವಾಯಿತು. ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ 117 ರನ್‌ಗಳ ಗೆಲುವಿನ ಗುರಿ ನೀಡಿದೆ. ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಬೇಕಾದರೆ 50 ಓವರ್‌ಗಳಲ್ಲಿ 117 ರನ್‌ಗಳಿಸಬೇಕಿದೆ. ಮಾರಕ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 5 ಹಾಗೂ ಆವೇಶ್ ಖಾನ್ 4, ಕುಲದೀಪ್‌ ಯಾದವ್‌ 1 ವಿಕೆಟ್‌ ಪಡೆದರು. ಆಫ್ರಿಕಾದ ಮೂವರು ಬ್ಯಾಟ್ಸ್‌ಮನ್‌ಗಳಾದ ರೀಜಾ ಹೆನ್ರಿಕ್ಸ್, ರಸಿ ವ್ಯಾನ್ ಡೆರ್ ಡಸೆ, ವಿಯಾನ್ ಮುಲ್ಡರ್ ಸೊನ್ನೆ ಸುತ್ತಿದರು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಟೋನಿ ಝೋರ್ಡ್‌, ಆ್ಯಂಡಿಲೆ ಪಿಶುವಾಯೊ ಅವರನ್ನು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ದಾಳಿಯನ್ನು ಎದುರಿಸಲಾಗದೇ ವಿಕೆಟ್‌ ಒಪ್ಪಿಸಿದರು. ಟೋನಿ ಡಿ ಝಾರ್ಜಿ 28, ಆ್ಯಂಡಿಲೆ ಪಿಶುವಾಯೊ 33, ಏಡನ್ ಮರ್ಕರಂ 12 ರನ್‌ಗಳಿಸಿ ತಂಡಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಿದರು. ಸ್ಕೋರ್‌... ದಕ್ಷಿಣ ಆಫ್ರಿಕಾ 27.3 ಓವರ್‌ಗಳಲ್ಲಿ 116/10 ! #! 👌 👌 116. 5⃣ @ 4⃣ @Avesh_6 1⃣ @imkuldeep18 👍 👍 ▶️ ://./tHxu0nUwwH # ../absNPG78rn ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.