ಪಾಕ್‌–ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ ಪಂದ್ಯ ಇಂದಿನಿಂದ ಮೆಲ್ಬರ್ನ್‌: ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ಪಂದ್ಯ ಇದೇ 26ರಂದು (ಮಂಗಳವಾರ) ಆರಂಭವಾಗಲಿದೆ. ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿಆತಿಥೇಯರು ಶಾನ್‌ ಮಸೂದ್‌ ನೇತೃತ್ವದ ಪಾಕ್ ತಂಡವನ್ನು 360 ರನ್‌ಗಳಿಂದ ನಾಲ್ಕೇ ದಿನಗಳ ಒಳಗೆ ಸೋಲಿಸಿದ್ದರು. ಸರಣಿ ಗೆಲ್ಲಲು ಆಸ್ಟ್ರೇಲಿಯಾ ಕಾತರದಿಂದಿದೆ. ಮೊದಲ ದಿನ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆದರೆ, ಬುಧವಾರ ವೇಳೆಗೆ ವಾತಾವರಣ ತಿಳಿಯಾಗುವ ಸಾಧ್ಯತೆಯಿದೆ. ಪಾಕ್‌ ತಂಡವನ್ನು ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಪಾಕಿಸ್ತಾನ ತಂಡ ಅನುಭವಿ ವಿಕೆಟ್ ಕೀಪರ್– ಬ್ಯಾಟರ್‌ ಸರ್ಫರಾಜ್ ಅಹ್ಮದ್ ಮತ್ತು ವೇಗದ ಬೌಲರ್‌ ಫಹೀಮ್ ಅಶ್ರಫ್‌ ಅವರನ್ನು ಅಂತಿಮ 11ರ ತಂಡದಿಂದ ಕೈಬಿಟ್ಟಿದೆ. ಸರ್ಫರಾಜ್‌ ಬದಲು ಹಿರಿಯ ಆಟಗಾರ ಮೊಹಮ್ಮದ್ ರಿಜ್ವಾನ್‌ ತಂಡಕ್ಕೆ ಮರಳಿದ್ದಾರೆ. ವೇಗದ ಬೌಲರ್‌ ಖುರ‍್ರಂ ಶೆಹಜಾದ್, ಸ್ಪಿನ್ನರ್‌ಗಳಾದ ಅಬ್ರಾರ್ ಅಹ್ಮದ್, ನೊಮನ್ ಅಲಿ ಗಾಯಾಳಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊಹಮ್ಮದ್ ನವಾಜ್ ವಿಕೆಟ್ ಕೀಪಿಂಗ್‌ ಹೊಣೆ ನಿಭಾಯಿಸಲಿದ್ದಾರೆ. ಸಾಜಿದ್ ಖಾನ್ ತಂಡದ ಏಕೈಕ ಸ್ಪಿನ್‌ ಬೌಲರ್‌ ಆಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.