: ಹೈದರಾಬಾದ್ ತಂಡದ ಮಾಲೀಕರಾದ ತೆಲುಗಿನ ಖ್ಯಾತ ನಟ ರಾಮ್ ಚರಣ್ ಮುಂಬೈ: ‘' ಖ್ಯಾತಿಯ ತೆಲುಗಿನ ಖ್ಯಾತ ನಟ ರಾಮ್ ಚರಣ್, ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್‌ ಲೀಗ್‌ನ (ಐಎಸ್‌ಪಿಎಲ್‌) ಹೈದರಾಬಾದ್ ತಂಡದ ಮಾಲೀಕರಾಗಿದ್ದಾರೆ. ಐಎಸ್‌ಪಿಎಲ್ ಸೇರ್ಪಡೆ ಕುರಿತಂತೆ ರಾಮ್ ಚರಣ್ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್‌ ಲೀಗ್‌ನ ಹೈದರಾಬಾದ್‌ ತಂಡದ ಮಾಲೀಕತ್ವವನ್ನು ಘೋಷಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಈ ಪಂದ್ಯಾವಳಿಯು ಪ್ರತಿಭೆಗಳನ್ನು ಪೋಷಿಸುವ. ಸಮುದಾಯದ ಮನೋಭಾವವನ್ನು ಬೆಳೆಸುವ ಮತ್ತು ಸ್ಟ್ರೀಟ್ ಕ್ರಿಕೆಟ್‌ನ ಸಾರವನ್ನು ಸಂಭ್ರಮಿಸುವ ವೇದಿಕೆಯಾಗಿದೆ. ಐಎಸ್‌ಪಿಎಲ್‌ನಲ್ಲಿ ಹೈದರಾಬಾದ್ ತಂಡದ ಉಪಸ್ಥಿತಿ ಎತ್ತಿ ತೋರಿಸಲು, ಸ್ಮರಣೀಯ ಕ್ಷಣಗಳನ್ನು ರೂಪಿಸಲು ಮತ್ತು ಉತ್ಸಾಹವನ್ನು ಹೆಚ್ಚಿಸಲು ನನ್ನೊಂದಿಗೆ ಸೇರಿ’ ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಹೃತಿಕ್ ರೋಶನ್ ಕ್ರಮವಾಗಿ ಮುಂಬೈ, ಶ್ರೀನಗರ ಮತ್ತು ಬೆಂಗಳೂರು ತಂಡಗಳ ಮಾಲೀಕತ್ವವನ್ನು ಘೋಷಿಸಿದ್ದರು. ಐಎಸ್‌ಪಿಎಲ್ ಭಾರತದ ಮೊದಲ ಟೆನಿಸ್ ಬಾಲ್ ಟಿ10 ಕ್ರಿಕೆಟ್ ಟೂರ್ನಿಯಾಗಿದೆ. ಉದ್ಘಾಟನಾ ಆವೃತ್ತಿಯಲ್ಲಿ 19 ಪಂದ್ಯಗಳು ನಡೆಯಲಿದ್ದು, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ಕೋಲ್ಕತ್ತ ಮತ್ತು ಶ್ರೀನಗರ ಸೇರಿ ಆರು ತಂಡಗಳು ಸರಣಿಯಲ್ಲಿ ಭಾಗವಹಿಸಲಿವೆ. ಮುಂದಿನ ವರ್ಷ ಮಾರ್ಚ್ 2ರಿಂದ ಮಾರ್ಚ್ 9ರವರೆಗೆ ಮುಂಬೈನಲ್ಲಿ ಐಎಸ್‌ಪಿಎಲ್ ಪಂದ್ಯಾವಳಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.