ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿ: ಮಧ್ಯಪ್ರದೇಶಕ್ಕೆ ಮಣಿದ ಕರ್ನಾಟಕ ಬೆಂಗಳೂರು: ಮಧ್ಯಪ್ರದೇಶದ ವೈಷ್ಣವಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ತತ್ತರಿಸಿದ ಕರ್ನಾಟಕ ತಂಡವು ಬುಧವಾರ ಇಂದೋರ್‌ನಲ್ಲಿ ನಡೆದ ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪರಾಭವಗೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಮಧ್ಯಪ್ರದೇಶ ತಂಡವು 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿತು. ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡವು 19.1 ಓವರ್‌ಗಳಲ್ಲಿ 96 ರನ್‌ಗೆ ಕುಸಿದು, 27 ರನ್‌ಗಳಿಂದ ಸೋತಿತು. ಮಧ್ಯಪ್ರದೇಶದ ವೈಷ್ಣವಿ ಶರ್ಮಾ 5 ರನ್‌ಗೆ 5 ವಿಕೆಟ್‌ ಪಡೆದು ಮಿಂಚಿದರು. ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 123 (ಕಲ್ಯಾಣಿ ಜಾಧವ್‌ 42, ಸೌಮ್ಯಾ ತಿವಾರಿ ಔಟಾಗದೆ 29). ಕರ್ನಾಟಕ: 19.1 ಓವರ್‌ಗಳಲ್ಲಿ 96 (ನಿಕಿ ಪ್ರಸಾದ್‌ 27, ವೈಷ್ಣವಿ ಶರ್ಮಾ 5ಕ್ಕೆ 5, ಧನಿ ಬುಚಾಡೆ 12ಕ್ಕೆ 2). ಫಲಿತಾಂಶ: ಮಧ್ಯಪ್ರದೇಶಕ್ಕೆ 27 ರನ್‌ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.