ಮಹಿಳಾ ಏಕದಿನ ಕ್ರಿಕೆಟ್‌: ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ ಮುಂಬೈ: ಫೋಬಿ ಲಿಚ್‌ಫೀಲ್ಡ್ ಮತ್ತು ಎಲಿಸ್‌ ಪೆರ‍್ರಿ ಅವರ ನಡುವಣ 2ನೇ ವಿಕೆಟ್‌ಗೆ 148 ರನ್ ಜೊತೆ ಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಗುರುವಾರ ನಡೆದ ಮಹಿಳೆಯರ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡವನ್ನು 21 ಎಸೆತಗಳಿರುವಂತೆ ಆರು ವಿಕೆಟ್‌ಗಳಿಂದ ಸೋಲಿಸಿತು. ಗೆಲುವಿಗೆ 283 ರನ್ ಗಳಿಸಬೇಕಾಗಿದ್ದ ಆಸ್ಟ್ರೇಲಿಯಕ್ಕೆ ಫೋಬಿ (89 ಎಸೆತಗಳಲ್ಲಿ 78) ಮತ್ತು ಎಲಿಸ್‌ (72 ಎಸೆತಗಳಲ್ಲಿ 75) ಆಸರೆಯಾದರು. ನಂತರ ಬೆತ್‌ ಮೂನಿ (42) ಮತ್ತು ತಹ್ಲಿಯಾ ಮೆಕ್‌ಗ್ರಾ (ಔಟಾಗದೇ 68) ನಾಲ್ಕನೇ ವಿಕೆಟ್‌ಗೆ 88 ರನ್‌ ಸೇರಿಸಿ ಗೆಲುವನ್ನು ಸುಲಭಗೊಳಿಸಿದರು. ಇದಕ್ಕೆ ಮೊದಲು ಭಾರತದ ಪರ ಜೆಮಿಮಾ ರಾಡ್ರಿಗಸ್‌ (77 ಎಸೆತಗಳಲ್ಲಿ 82) ಮತ್ತು 9ನೇ ಕ್ರಮಾಂಕದಲ್ಲಿ ಆಡಿದ ಪೂಜಾ ವಸ್ತ್ರಾಕರ್ (46 ಎಸೆತಗಳಲ್ಲಿ 62) ಉಪಯುಕ್ತ ಆಟವಾಡಿದ್ದರು. ಆರಂಭ ಆಟಗಾರ್ತಿ ಯಸ್ತಿಕಾ ಭಾಟಿಯಾ (49) ಪ್ರಮುಖ ಕಾಣಿಕೆ ನೀಡಿದ ಇನ್ನೊಬ್ಬ ಆಟಗಾರ್ತಿ. ಸಂಕ್ಷಿಪ್ತ ಸ್ಕೋರು: ಭಾರತ: 50 ಓವರುಗಳಲ್ಲಿ 8 ವಿಕೆಟ್‌ಗೆ 282 (ಯಸ್ತಿಕಾ ಭಾಟಿಯಾ 49, ಜೆಮಿಮಾ ರಾಡ್ರಿಗಸ್‌ 82, ಪೂಜಾ ವಸ್ತಾಕರ್ ಔಟಾಗದೇ 62); ಆಸ್ಟ್ರೇಲಿಯಾ: 46.3 ಓವರುಗಳಲ್ಲಿ 4 ವಿಕೆಟ್‌ಗೆ 285 (ಎಲಿಸ್‌ ಪೆರಿ 75, ಫೋಬಿ ಲಿಚ್‌ಫೀಲ್ಡ್‌ 78, ಬೆತ್‌ ಮೂನಿ 42, ತಹ್ಲಿಯಾ ಮೆಕ್‌ಗ್ರಾ ಔಟಾಗದೇ 68). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ ಜಯ ‌ಪಂದ್ಯದ ಆಟಗಾರ್ತಿ: ಫೋಬಿ ಲಿಚ್‌ಫೀಲ್ಡ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.