ರಣಜಿ ಕ್ರಿಕೆಟ್: ಹೈದರಾಬಾದ್‌ಗೆ ಸುಲಭ ಜಯ ಧೀಮಾಪುರ: ಒಟ್ಟು ಎಂಟು ವಿಕೆಟ್ ಗಳಿಸಿದ ತನಯ್ ತ್ಯಾಗರಾಜನ್ ಬೌಲಿಂಗ್ ಬಲದಿಂದ ಹೈದರಾಬಾದ್ ತಂಡವು ರಣಜಿ ಟ್ರೋಫಿ ಟೂರ್ನಿಯ ಪ್ಲೇಟ್ ಗುಂಪಿನಲ್ಲಿ ನಾಗಾಲ್ಯಾಂಡ್ ಎದುರು ಸುಲಭ ಜಯ ಸಾಧಿಸಿತು. ನಾಗಾಲ್ಯಾಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಎರಡೇ ದಿನಗಳಲ್ಲಿ ಮುಕ್ತಾಯವಾಯಿತು. ಹೈದರಾಬಾದ್ ತಂಡವು ಇನಿಂಗ್ಸ್ ಮತ್ತು 194 ರನ್‌ಗಳಿಂದ ಗೆದ್ದಿತು. ಮೊದಲ ಇನಿಂಗ್ಸ್‌ನಲ್ಲಿ ಹೈದರಾಬಾದ್ ತಂಡವು 5 ವಿಕೆಟ್‌ಗಳಿಗೆ 474 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ನಾಗಾಲ್ಯಾಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ತನಯ್ (43ಕ್ಕೆ5) ಅವರ ಬೌಲಿಂಗ್ ಮುಂದೆ ಕೇವಲ 153 ರನ್ ಗಳಿಸಿ ಆಲೌಟ್ ಆಯಿತು. ಹೈದರಾಬಾದ್ ತಂಡವು ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲಿಯೂ ತನಯ್ ಮೂರು ಮತ್ತು ಚಾಮಾ ಮಿಲಿಂದ್ ನಾಲ್ಕು ವಿಕೆಟ್ ಗಳಿಸಿದರು. 127 ರನ್‌ಗಳ ಅಲ್ಪಮೊತ್ತಕ್ಕೆ ನಾಗಾಲ್ಯಾಂಡ್ ಕುಸಿಯಿತು. ಸಂಕ್ಷಿಪ್ತ ಸ್ಕೋರು: ಪ್ಲೇಟ್‌ ಗುಂಪು: ಮೊದಲ ಇನಿಂಗ್ಸ್: ಹೈದರಾಬಾದ್: 76.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 474 (ಜಿ. ರಾಹುಲ್‌ ಸಿಂಗ್ 214, ತಿಲಕ್ ವರ್ಮಾ ಔಟಾಗದೆ 100, ತನ್ಮಯ್ ಅಗರವಾಲ್ 80, ರಾಂಗ್‌ಸೆನ್ ಜೊನಾಥನ್ 56ಕ್ಕೆ1) ನಾಗಾಲ್ಯಾಂಡ್: 51.3 ಓವರ್‌ಗಳಲ್ಲಿ 153 (ಜಗನ್ನಾಥ್ ಸಿನಿವಾಸ್ ಔಟಾಗದೆ 49, ಸುಮಿತ್ ಕುಮಾರ್ 29, ಜೊಶುವಾ ಓಜುಕಮ್ 27, ತನಯ್ ತ್ಯಾಗರಾಜನ್ 43ಕ್ಕೆ5, ಕಾರ್ತಿಕೇಯ ಕಾಕ್ 3ಕ್ಕೆ2, ಚಾಮಾ ಮಿಲಿಂದ್ 30ಕ್ಕೆ2) ಎರಡನೇ ಇನಿಂಗ್ಸ್; ನಾಗಾಲ್ಯಾಂಡ್: 34.5 ಓವರ್‌ಗಳಲ್ಲಿ 127 (ಸುಮಿತ್ ಕುಮಾರ್ 62, ರಾಂಗ್‌ಸೇನ್ ಜೊನಾಥನ್ 23, ಚಾಮಾ ಮಿಲಿಂದ್ 21ಕ್ಕೆ4, ತನಯ್ ತ್ಯಾಗರಾಜನ್ 27ಕ್ಕೆ3) ಫಲಿತಾಂಶ: ಹೈದರಾಬಾದ್ ತಂಡಕ್ಕೆ ಇನಿಂಗ್ಸ್ ಮತ್ತು 194 ರನ್‌ಗಳ ಜಯ. ಬಿ ಗುಂಪು: ಮೊದಲ ಇನಿಂಗ್ಸ್: ಮುಂಬೈ: 76.2 ಓವರ್‌ಗಳಲ್ಲಿ 251 (ಭೂಪೆನ್ ಲಾಲ್‌ವಾನಿ 65, ಸುವೇದ್ ಪಾರ್ಕರ್ 50, ಶಿವಂ ದುಬೆ 41, ತನುಷ್ ಕೋಟ್ಯಾನ್ 50, ವಿ. ಪ್ರತಾಪ್ ಸಿಂಗ್ 45ಕ್ಕೆ5, ಶಕೀಬುಲ್ ಗಣಿ 60ಕ್ಕೆ2, ಹಿಮಾಂಶು ಸಿಂಗ್ 21ಕ್ಕೆ2) ಬಿಹಾರ: 37 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 89 (ಆಕಾಶ್ ರಾಜ್ ಬ್ಯಾಟಿಂಗ್ 26, ಶಕೀಬುಲ್ ಗಣಿ 22, ಮೋಹಿತ್ ಅವಸ್ತಿ 22ಕ್ಕೆ4, ಶಿವಂ ದುಬೆ 13ಕ್ಕೆ2) ಮೊದಲ ಇನಿಂಗ್ಸ್: ಉತ್ತರಪ್ರದೇಶ: 83.4 ಓವರ್‌ಗಳಲ್ಲಿ 302 (ಆರ್ಯನ್ ಜುಯಾಲ್ 28, ಪ್ರಿಯಂ ಗಾರ್ಗ್ 44, ಸಮೀರ್ ರಿಜ್ವಿ 26, ರಿಂಕು ಸಿಂಗ್ 92, ಧ್ರುವ್ ಜುರೇಲ್ 63, ಸೌರಭ್ ಕುಮಾರ್ 20, ಬಾಸಿಲ್ ಥಂಪಿ 83ಕ್ಕೆ2, ನಿಧೀಶ್ 68ಕ್ಕೆ3, ಜಲಜ್ ಸಕ್ಸೆನಾ 65ಕ್ಕೆ2) ಕೇರಳ: 65 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 220 (ಸಚಿನ್ ಬೇಬಿ 38, ವಿಷ್ಣು ವಿನೋಧ್ 74, ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 36, ಸಂಜು ಸ್ಯಾಮ್ಸನ್ 35, ಕುಲದೀಪ್ ಯಾದವ್ 66ಕ್ಕೆ3) ಸಿ ಗುಂಪು: ಮೊದಲ ಇನಿಂಗ್ಸ್: ತ್ರಿಪುರಾ: 123.4 ಓವರ್‌ಗಳಲ್ಲಿ 484 (ಶ್ರೀದಾಮ್ ಪಾಲ್ 112, ಸುದೀಪ್ ಚಟರ್ಜಿ 42, ಗಣೇಶ್ ಸತೀಶ್ 73, ವೃದ್ಧಿಮಾನ್ ಸಹಾ 97, ಮಣಿಶಂಕರ್ ಮುರಾಸಿಂಗ್ 50, ಲಕ್ಷ್ಯ ಗಾರ್ಗ್ 87ಕ್ಕೆ2 ಅರ್ಜುನ್ ತೆಂಡೂಲ್ಕರ್ 94ಕ್ಕೆ2, ವಿಜೇಶ್ ಪ್ರಭುದೇಸಾಯಿ 99ಕ್ಕೆ2) ಗೋವಾ: 22 ಓವರ್‌ಗಳಲ್ಲಿ 4ಕ್ಕೆ53 (ಸುಯಶ್ ಪ್ರಭುದೇಸಾಯಿ 13, ಸ್ನೇಹಲ್ ಕೌತಣಕರ್ 19, ಅಭಿಜಿತ್ ಸರಕಾರ್ 13ಕ್ಕೆ3) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.