ಮುಂಬೈ: ಚೆಂಡು ತಲೆಗೆ ಬಡಿದು ವ್ಯಕ್ತಿ ಸಾವು ಮುಂಬೈ: ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವಾಗ ತಲೆಗೆ ಚೆಂಡು ಅಪ್ಪಳಿಸಿ 52 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಾತುಂಗಾದಲ್ಲಿರುವ ದಡ್ಕರ್ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಯೇಶ್ ಚುನ್ನಿಲಾಲ್ ಸವ್ಲಾ ಫೀಲ್ಡಿಂಗ್ ಮಾಡುತ್ತಿದ್ದರು. ಆದರೆ ಅದೇ ಮೈದಾನದಲ್ಲಿ ಇನ್ನೊಂದು ಪಂದ್ಯ ನಡೆಯುತ್ತಿತ್ತು. ಆ ಪಂದ್ಯದಲ್ಲಿ ಆಟಗಾರ ಆಡಿದ್ದ ಚೆಂಡು ಜಯೇಶ್ ಅವರ ತಲೆಯ ಹಿಂಬದಿಗೆ ಅಪ್ಪಳಿಸಿತ್ತು. ಪೆಟ್ಟು ತಿಂದ ಜಯೇಶ್ ನೆಲಕ್ಕೆ ಕುಸಿದರು. ಕೂಡಲೇ ಆಸ್ಪತ್ತೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.