ಕೂಚ್ ಬಿಹಾರ್ ಟ್ರೋಫಿ | ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ ಬೆಳಗಾವಿ: ಹಾರ್ದಿಕ್‌ ರಾಜ್‌(100 ರನ್‌, 4x12, 6x1) ಸಿಡಿಸಿದ ಶತಕ ಹಾಗೂ ಅಗಸ್ತ್ಯ ರಾಜು(52ಕ್ಕೆ 4), ಧೀರಜ್‌ ಗೌಡ(94ಕ್ಕೆ 4) ಬೌಲಿಂಗ್‌ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ಇಲ್ಲಿ ನಡೆಯುತ್ತಿರುವ ಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಮೇಲುಗೈ ಸಾಧಿಸಿದ್ದು ಗೆಲುವಿನ ಹೊಸ್ತಿಲಲ್ಲಿದೆ. ಶನಿವಾರ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 360 ರನ್ ಗಳಿಸಿದ್ದ ಕರ್ನಾಟಕ, ಭಾನುವಾರ 129.3 ಓವರ್‌ಗಳಲ್ಲಿ 418ಕ್ಕೆ ಆಲೌಟ್‌ ಆಯಿತು. ಯುವರಾಜ್‌ ಅರೋರಾ (51, 4x8 ಬೌಂಡರಿ) ಅರ್ಧಶತಕ ಬಾರಿಸಿ, 292 ರನ್‌ಗಳ ಮುನ್ನಡೆ ಗಳಿಸಲು ನೆರವಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ತಮಿಳುನಾಡು 70.5 ಓವರ್‌ಗಳಲ್ಲಿ 302ಕ್ಕೆ ಆಲೌಟ್‌ ಆಯಿತು. ಕೆಟಿಎ ಮಾಧವ ಪ್ರಸಾದ್‌(118 ರನ್‌, 4x11, 6x1) ಮತ್ತು ಎಸ್‌.ಶ್ರೇನಿಕ್‌(73 ರನ್‌, 4x6, 1x6) ಉತ್ತಮ ಆಟವಾಡಿದರು. ಬ್ಯಾಟಿಂಗ್‌ನಲ್ಲಿ ಮತ್ತೆ ಎಡವಿದ ಎದುರಾಳಿ ತಂಡ, ಈಗ ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕಕ್ಕೆ 10 ರನ್‌ಗಳ ಗುರಿ ನೀಡಿದೆ. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್‌: ತಮಿಳುನಾಡು ಮೊದಲ ಇನ್ನಿಂಗ್ಸ್‌: 54.5 ಓವರ್‌ಗಳಲ್ಲಿ 126; ಕರ್ನಾಟಕ: 129.3 ಓವರ್‌ಗಳಲ್ಲಿ 418(ಹಾರ್ದಿಕ್‌ ರಾಜ್‌ 100, ಯುವರಾಜ್‌ ಅರೋರಾ 51, ಸಮರ್ಥ ಎನ್‌. 0, ಅಗಸ್ತ್ಯ ರಾಜು 4;ಪಿ.ವಿಘ್ನೇಶ 121ಕ್ಕೆ 4; ತಮಿಳುನಾಡು ಎರಡನೇ ಇನ್ನಿಂಗ್ಸ್‌: ಅಭಿನವ್‌ ಕಣ್ಣನ್‌ 6, ಎಸ್‌.ಶ್ರೇನಿಕ್‌ 73, ಅಕ್ಷಯ ಸರಂಗಧಾರ 18, ಎಸ್‌.ಮೊಹಮ್ಮದ್‌ಅಲಿ 0, ಕೆಟಿಎ ಮಾಧವ ಪ್ರಸಾದ್‌ 118, ಆಂದ್ರೆ ಸಿದ್ಧಾರ್ಥ 33, ವಿ.ಎಸ್‌.ಕಾರ್ತಿಕ್‌ ಮನಿಕಂದನ್‌ 7, ಪಿ.ವಿಘ್ನೇಶ 8, ಆರ್‌.ಪ್ರವೀಣ ಔಟಾಗದೆ 10, ಕೆ.ಕೆವಿನ್‌ ರೊಮಾರಿಯೊ 8, ಬಿ.ಸಚಿನ್‌ 11; ಅಗಸ್ತ್ಯ ರಾಜು 52ಕ್ಕೆ 4, ಧೀರಜ್‌ ಗೌಡ 94ಕ್ಕೆ 4, ಸಮರ್ಥ ಎನ್‌. 48ಕ್ಕೆ 1, ಹಾರ್ದಿಕ್‌ ರಾಜ್‌ 58ಕ್ಕೆ 1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.