ಕ್ರಿಕೆಟ್ ‌| ವಿಕೆಟ್‌ಕೀಪರ್‌ ಸಂಖ್ಯೆ ಹೆಚ್ಚಳ: ಕರೀಂ ಸಂತಸ ಪೆಲೆಕೆಲೆ: ಭಾರತ ತಂಡ ದಲ್ಲಿ ಈಗ ಉತ್ತಮ ವಿಕೆಟ್‌ಕೀಪರ್‌ಗಳ ಸಂಖ್ಯೆ ಹೆಚ್ಚಿದೆ. ಮೊದಲ ವಿಕೆಟ್‌ಕೀಪರ್ ಸ್ಥಾನಕ್ಕಾಗಿ ಪೈಪೋಟಿ ಬಲವಾಗಿದೆ. ಇದೊಂ ದು ಉತ್ತಮ ಬೆಳವಣಿಗೆ ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ಸಬಾ ಕರೀಂ ಹೇಳಿದರು. ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ. ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಹಾಗೂ ಕೆ.ಎಲ್. ರಾಹುಲ್ ಸ್ಥಾನ ಗಳಿಸಿದ್ದಾರೆ. ಭಾರತ ತಂಡದ ಮಾಜಿ ವಿಕೆಟ್‌ ಕೀಪರ್ ಕೂಡ ಆಗಿರುವ ಕರೀಂ ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು. ‘ಕ್ರಿಕೆಟ್ ತಂಡದಲ್ಲಿ ವಿಕೆಟ್‌ಕೀಪರ್ ಸ್ಥಾನವು ಮಹತ್ವ ದ್ದು. ದೇಶದಲ್ಲಿ ಈ ವಿಭಾಗದಲ್ಲಿ ಉತ್ತಮ ಆಟಗಾರರು ಹೊರಹೊ ಮ್ಮುತ್ತಿರುವುದು ಆಶಾದಾಯಕ ಬೆಳವಣಿಗೆ. ಶ್ರೀಲಂಕಾ ವಿರುದ್ಧದ ಸರಣಿಯು ಮಹತ್ವದ್ದಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಲ್ಲದ ಟಿ20 ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಲಭಿಸಿದೆ. ಅವರು ತಮ್ಮ ಸಾಮರ್ಥ್ಯ ಮೆರೆಯಲು ಇದು ಸೂಕ್ತ ಸಮಯ. ಭವಿಷ್ಯದಲ್ಲಿ ಭಾರತ ತಂಡದ ಶಕ್ತಿಯಾಗುವಂತಹ ಆಟಗಾರರು ಇದರಲ್ಲಿದ್ಧಾರೆ’ ಎಂದರು. ‘ಕೆ.ಎಲ್. ರಾಹುಲ್ ಏಕದಿನ ಸರಣಿಯಲ್ಲಿ ಆಡಲಿರುವುದು ಸೂಕ್ತವಾಗಿದೆ. ಅವರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ವಾಗಿ ಆಡಿದ್ದರು. ಅನುಭವ ಮತ್ತು ಪ್ರತಿಭೆ ಎರಡೂ ಅವ ರಲ್ಲಿದೆ. ತಂಡದ ಶಕ್ತಿಯಾಗುವ ಆಟಗಾರ ಅವರು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.