: ರೋಹಿತ್‌, ರಿಂಕು ಅಬ್ಬರ; ಅಫ್ಗಾನ್‌ಗೆ 213ರನ್‌ ಗೆಲುವಿನ ಗುರಿ ಬೆಂಗಳೂರು: ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಿನ ಮೂರನೇ ‘ಚುಟುಕು’ ಪಂದ್ಯದಲ್ಲಿ ಭಾರತ ತಂಡ ಅಫ್ಗಾನಿಸ್ತಾನಕ್ಕೆ 213ರನ್‌ಗಳ ಗೆಲುವಿನ ಗುರಿ ನೀಡಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಕೇವಲ 22ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ರೋಹಿತ್‌ ಶರ್ಮಾ ಅವರ ಜೊತೆಯಾದ ರಿಂಕು ಸಿಂಗ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. 20 ಓವರ್‌ಗಳಲ್ಲಿ ಭಾರತ 4 ವಿಕೆಟ್‌ ಕಳೆದುಕೊಂಡು 212 ಗಳಿಸಿತು. ರೋಹಿತ್‌ 121, ರಿಂಗ್‌ ಸಿಂಗ್‌ 69 ರನ್‌ಗಳಿಸಿ ಅಜೇಯರಾದರು. ಅಫ್ಗಾನಿಸ್ತಾನ ಪರ ಮಲಿಕ್‌ 3 ವಿಕೆಟ್‌ ಪಡೆದು ಗಮನ ಸೆಳೆದರು. ಈ ಪಂದ್ಯವನ್ನು ಗೆಲ್ಲಬೇಕಾದರೆ ಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 213 ರನ್‌ಗಳಿಸಬೇಕಿದೆ. ಮೂರು ಪಂದ್ಯಗಳ ಸರಣಿಯನ್ನು ಆತಿಥೇಯರು ಈಗಾಗಲೇ 2–0ಯಿಂದ ಕೈವಶ ಮಾಡಿಕೊಂಡಿದ್ದಾರೆ. ! @ImRo45 🔝 - @rinkusingh235 👌# 212/4 . ▶️ ://./ # | @ ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.