: ಅಫ್ಗಾನಿಸ್ತಾನ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಇಂದೋರ್: ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿದೆ. ಮೊಹಾಲಿಯಲ್ಲಿ ಮೊದಲ ಪಂದ್ಯ ಗೆದ್ದ ಭಾರತ 1–0 ಮುನ್ನಡೆ ಪಡೆದಿದೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಹಾಗೇ ಜೈಸ್ವಾಲ್‌ ಕೂಡ ಸ್ಥಾನಪಡೆದಿದ್ದು ಗಿಲ್‌ ತಂಡದಿಂದ ಹೊರಗುಳಿದ್ದಾರೆ. ಜೂನ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು ಈ ಸರಣಿ ಬಿಟ್ಟರೆ, ಭಾರತ ತಂಡಕ್ಕೆ ಯಾವುದೇ ಟಿ20 ಸರಣಿ ಇಲ್ಲದ ಕಾರಣ ಈ ಸರಣಿಯು ಯುವ ಆಟಗಾರರ ಪಾಲಿಗೆ ಮಹತ್ವದ್ದು. # . . - ://./ #@ ../J4XjBsaOue ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.