ಫಿನ್ ಅಬ್ಬರದ ಆಟ; ಕಿವೀಸ್‌ಗೆ ಜಯ ಹ್ಯಾಮಿಲ್ಟನ್, ನ್ಯೂಜಿಲೆಂಡ್ (ಎಪಿ): ಆರಂಭಿಕ ಬ್ಯಾಟರ್ ಫಿನ್ ಅಲೆನ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ಎದುರಿನ ಟಿ20 ಸರಣಿಯಲ್ಲಿ ಸತತ ಎರಡನೇ ಜಯ ಸಾಧಿಸಿತು. ಸೆಡಾನ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಫಿನ್ ಅಲೆನ್ (74; 41ಎ, 4X7, 6X5) ಮತ್ತು ಡೆವೊನ್ ಕಾನ್ವೆ (20; 15ಎ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 194 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ 19.3 ಓವರ್‌ಗಳಲ್ಲಿ 173 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಪಾಕ್ ತಂಡದ ಬಾಬರ್ ಆಜಂ (66; 43ಎ, 4X7, 6X2) ಮತ್ತು ಫಕಾರ್ ಜಮಾನ್ (50; 25ಎ, 4X3, 6X5) ಅರ್ಧಶತಕ ಗಳಿಸಿದರೂ ಉಳಿದ ಬ್ಯಾಟರ್‌ಗಳು ವಿಫಲರಾದರು. ಕಿವೀಸ್ ಬಳಗದ ಆ್ಯಡಂ ಮಿಲ್ನೆ ನಾಲ್ಕು ವಿಕೆಟ್ ಗಳಿಸಿದರು. ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 194 (ಫಿನ್ ಅಲೆನ್ 74, ಡೆವೊನ್ ಕಾನ್ವೆ 20, ಮಿಚೆಲ್ ಸ್ಯಾಂಟನರ್ 25, ಹ್ಯಾರಿಸ್ ರವೂಫ್ 38ಕ್ಕೆ3, ಅಬ್ಬಾಸ್ ಆಫ್ರಿದಿ 43ಕ್ಕೆ2) ಪಾಕಿಸ್ತಾನ: 19.3 ಓವರ್‌ಗಳಲ್ಲಿ 173 (ಬಾಬರ್ ಆಜಂ 66, ಫಕಾರ್ ಜಮಾನ್ 50, ಶಾಹೀನ್ ಆಫ್ರಿದಿ 22, ಟಿಮ್ ಸೌಥಿ 31ಕ್ಕೆ2, ಆ್ಯಡಂ ಮಿಲ್ನೆ 33ಕ್ಕೆ4, ಬೆನ್ ಸೀರ್ಸ್ 28ಕ್ಕೆ2, ಈಶ್ ಸೋಧಿ 33ಕ್ಕೆ2) ಫಲಿತಾಂಶ: ನ್ಯೂಜಿಲೆಂಡ್‌ಗೆ 21 ರನ್‌ಗಳ ಜಯ ಹಾಗೂ 2–0 ಮುನ್ನಡೆ. ಪಂದ್ಯ ಶ್ರೇಷ್ಠ: ಫೀನ್ ಅಲೆನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.