: ಭಾರತಕ್ಕೆ 173ರನ್‌ಗಳ ಗೆಲುವಿನ ಗುರಿ ನೀಡಿದ ಅಫ್ಗಾನಿಸ್ತಾನ ಇಂದೋರ್: ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ಭಾರತಕ್ಕೆ 173ರನ್‌ಗಳ ಗೆಲುವಿನ ಗುರಿ ನೀಡಿದೆ. ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟ್ ಮಾಡಿದ ಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 172ರನ್‌ಗಳಿಗೆ ಆಲೌಟ್‌ ಆಯಿತು. ಅಫ್ಗಾನಿಸ್ತಾನ ಪರ ಗುಲ್ಬದೀನ್‌ 57ರನ್‌ಗಳಿಸಿ ಗಮನ ಸೆಳೆದರು. ಭಾರತದ ಪರ ಅರ್ಷದೀಪ್‌ 3 ವಿಕೆಟ್‌ ಪಡೆದರು. ಮೊಹಾಲಿಯಲ್ಲಿ ಮೊದಲ ಪಂದ್ಯ ಗೆದ್ದ ಭಾರತ 1–0 ಮುನ್ನಡೆ ಪಡೆದಿದೆ. ಸ್ಕೋರ್‌... ಅಫ್ಗಾನಿಸ್ತಾನ: 172/10 172 20 .# . - ://./CWSAhSZc45 #@ ../uiAjfzf35O ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.