ಕಿವೀಸ್‌ಗೆ 4ನೇ ಜಯ ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್ ತಂಡ ಶುಕ್ರವಾರ ನಡೆದ ನಾಲ್ಕನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಐದು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 4–0 ಮುನ್ನಡೆ ಪಡೆದಿದ್ದು ‘ಕ್ಲೀನ್ ಸ್ವೀಪ್‌’ ಹಾದಿಯಲ್ಲಿದೆ. ಭಾನುವಾರ ಅಂತಿಮ ಪಂದ್ಯ ನಡೆಯಲಿದೆ. ಶಹೀನ್ ಶಾ ಅಫ್ರೀದಿ ದಾಳಿಗೆ 3 ವಿಕೆಟ್‌ಗೆ 20 ರನ್ ಗಳಿಸಿ ತಂಡ ಪರದಾಡುತ್ತಿದ್ದಾಗ 44 ಎಸೆತಗಳಲ್ಲಿ ಅಜೇಯ 72 ರನ್ ಹೊಡೆದ ಡೇರಿಲ್‌ ಮಿಚೆಲ್ ಪಂದ್ಯದ ಆಟಗಾರ ಎನಿಸಿದರು. ಸ್ಕೋರುಗಳು: ಪಾಕಿಸ್ತಾನ: 20 ಓವರುಗಳಲ್ಲಿ 5 ವಿಕೆಟ್‌ಗೆ 158 (ಮೊಹಮ್ಮದ್ ರಿಜ್ವಾಲ್ ಔಟಾಗದೇ 90; ಮ್ಯಾಟ್ ಹೆನ್ರಿ 22ಕ್ಕೆ2, ಲಾಕಿ ಫರ್ಗ್ಯುಸನ್ 27ಕ್ಕೆ2); ನ್ಯೂಜಿಲೆಂಡ್‌: 18.1 ಓವರುಗಳಲ್ಲಿ 3 ವಿಕೆಟ್‌ಗೆ 159 (ಡೇರಿಲ್ ಮಿಚೆಲ್ ಔಟಾಗದೇ 72, ಗ್ಲೆನ್‌ ಫಿಲಿಪ್ಸ್‌ ಔಟಾಗದೇ 70; ಶಹೀನ್ ಶಾ ಅಫ್ರೀದಿ 34ಕ್ಕೆ3) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.