| ಶಾಮರ್ ಬಿರುಗಾಳಿಗೆ ಕುಸಿದ ಆಸ್ಟ್ರೇಲಿಯಾ ಬ್ರಿಸ್ಬೇನ್: ವೆಸ್ಟ್ ಇಂಡೀಸ್ ತಂಡದ ಯುವಪ್ರತಿಭೆ ಶಾಮರ್ ಜೋಸೆಫ್ ಅವರ ಸ್ವಿಂಗ್ ದಾಳಿಯ ಮುಂದೆ ಆತಿಥೇಯ ಆಸ್ಟ್ರೇಲಿಯಾ ತಂಡವು ತತ್ತರಿಸಿತು. ಗಾಬಾ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾನುವಾರ ಶಾಮರ್ (68ಕ್ಕೆ7) ದಾಳಿಯ ಬಲದಿಂದ ವೆಸ್ಡ್ ಇಂಡೀಸ್ ತಂಡವು 8 ರನ್‌ಗಳ ಜಯ ಸಾಧಿಸಿತು. 1997ರ ನಂತರ ವಿಂಡೀಸ್ ತಂಡವು ಆಸ್ಟ್ರೇಲಿಯಾದಲ್ಲಿ ಗೆದ್ದ ಮೊದಲ ಟೆಸ್ಟ್ ಇದು. ಗಾಯಗೊಂಡಿದ್ದರೂ ಅಮೋಘ ಬೌಲಿಂಗ್ ಪ್ರದರ್ಶಿಸಿದ 24 ವರ್ಷದ ಜೋಸೆಫ್ ಈ ಪಂದ್ಯದ ಎರಡೂ ಇನಿಂಗ್ಸ್ ಸೇರಿ ಎಂಟು ವಿಕೆಟ್ ಗಳಿಸಿದರು. 216 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆತಿಥೇಯ ತಂಡವು 50.5 ಓವರ್‌ಗಳಲ್ಲಿ 207 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮೂರು ಪಂದ್ಯಗಳ ಸರಣಿಯು ಸಮಬಲವಾಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 311, ಆಸ್ಟ್ರೇಲಿಯಾ: 289. ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 72.3 ಓವರ್‌ಗಳಲ್ಲಿ 193. ಆಸ್ಟ್ರೇಲಿಯಾ: 50.5 ಓವರ್‌ಗಳಲ್ಲಿ 207(ಸ್ಟೀವ್ ಸ್ಮಿತ್ ಔಟಾಗದೆ 91, ಕ್ಯಾಮರಾನ್ ಗ್ರೀನ್ 42, ಮಿಚೆಲ್ ಸ್ಟಾರ್ಕ್ 21, ಅಲ್ಜರಿ ಜೋಸೆಫ್ 62ಕ್ಕೆ2, ಶಾಮರ್ ಜೋಸೆಫ್ 68ಕ್ಕೆ7) ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 8 ರನ್ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.