23 ವರ್ಷದೊಳಗಿನ ಮಹಿಳೆಯರ ಏಕದಿನ ಕ್ರಿಕೆಟ್‌: ನಾಗಾಲ್ಯಾಂಡ್‌ಗೆ ಮಣಿದ ಕರ್ನಾಟಕ ಬೆಂಗಳೂರು: ಅದಿತಿ ಬಕ್ಕಾ ಅವರ ಪರಿಣಾಮಕಾರಿ ದಾಳಿಯಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ 260 ರನ್‌ಗಳಿಂದ ನಾಗಾಲ್ಯಾಂಡ್‌ ವಿರುದ್ಧ ಸುಲಭ ಜಯ ಸಾಧಿಸಿತು. ಕೋಲ್ಕತ್ತದ 22 ಯಾರ್ಡ್ಸ್ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 316 ರನ್‌ ಗಳಿಸಿತ್ತು. ರೋಷಿನಿ ಕಿರಣ್ (88 ರನ್‌; 110ಎ, 4x10), ಮಿಥಿಲಾ ವಿನೋದ್‌ (87 ರನ್‌; 71ಎ, 4x12, 6x1) ಮತ್ತು ಚಾಂದಸಿ ಕೃಷ್ಣಮೂರ್ತಿ (57 ರನ್‌; 54ಎ, 4x9) ಅರ್ಧಶತಕ ಗಳಿಸಿ ಬೃಹತ್‌ ಮೊತ್ತಕ್ಕೆ ಕಾರಣರಾದರು. ಮೆರೆನ್ಸೋಲಾ ನಾಲ್ಕು ವಿಕೆಟ್‌ ಪಡೆದರು. ಗುರಿಯನ್ನು ಬೆನ್ನತ್ತಿದ ನಾಗಾಲ್ಯಾಂಡ್‌ ತಂಡವನ್ನು ಕರ್ನಾಟಕದ ಅದಿತಿ ಬಕ್ಕಾ (20ಕ್ಕೆ 5) ಕಾಡಿದರು. ಹೀಗಾಗಿ, 19.2 ಓವರ್‌ಗಳಲ್ಲಿ ತಂಡವು ಕುಸಿಯಿತು. ಸಂಕ್ಷಿಪ್ತ ಸ್ಕೋರ್‌ ಕರ್ನಾಟಕ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 316 (ರೋಷಿನಿ ಕಿರಣ್‌ 88, ಚಾಂದಸಿ ಕೃಷ್ಣಮೂರ್ತಿ 57, ಮಿಥಿಲಾ ವಿನೋದ್‌ 87; ಮೆರೆನ್ಸೋಲಾ 69ಕ್ಕೆ 4). ನಾಗಾಲ್ಯಾಂಡ್‌: 19.2 ಓವರ್‌ಗಳಲ್ಲಿ 56 (ಅದಿತಿ ಬಕ್ಕಾ 20ಕ್ಕೆ 5) ಫಲಿತಾಂಶ: ಕರ್ನಾಟಕಕ್ಕೆ 260 ರನ್‌ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.