ಬೆರಳಿನ ಗಾಯ ತೀವ್ರ ಸ್ವರೂಪದ್ದಲ್ಲ: ಶುಭಮನ್ ಗಿಲ್ ವಿಶಾಖಪಟ್ಟಣ: ತಮಗೆ ಆಗಿರುವ ತೋರು ಬೆರಳಿನ ಗಾಯ ತೀವ್ರ ಸ್ವರೂಪದ್ದಲ್ಲ ಎಂಬುದು ಸ್ಕ್ಯಾನಿಂಗ್‌ನಿಂದ ಗೊತ್ತಾಗಿದೆ. ಮುಂದಿನ ಕೆಲ ದಿನಗಳಲ್ಲಿ ಸಂಪೂರ್ಣ ಗುಣವಾಗಲಿದೆ ಎಂದು ಭಾರತದ ಬ್ಯಾಟರ್ ಶುಭಮನ್ ಗಿಲ್ ಸೋಮವಾರ ಇಲ್ಲಿ ತಿಳಿಸಿದರು. ಎರಡನೇ ಟೆಸ್ಟ್‌ನ ನಾಲ್ಕನೇ ದಿನವಾದ ಸೋಮವಾರ ಅವರು ಮೈದಾನಕ್ಕೆ ಇಳಿದಿರಲಿಲ್ಲ. ಅವರ ಬದಲು ಸರ್ಫರಾಜ್ ಖಾನ್ ಫೀಲ್ಡ್‌ ಮಾಡಿದ್ದರು. ಮೂರನೇ ದಿನವಾದ ಭಾನುವಾರ ಗಿಲ್ 147 ಎಸೆತಗಳಲ್ಲಿ 104 ರನ್ ಗಳಿಸಿದ್ದರು. ಭಾನುವಾರ ಆಟದ ಕೊನೆಯ ಅವಧಿಯಲ್ಲಿ, ಇಂಗ್ಲೆಂಡ್ ಆಡುವ ವೇಳೆ ಅವಸರದಲ್ಲಿ ಕ್ರೀಡಾಂಗಣದಿಂದ ಹೊರಗೆ ಹೋಗಿದ್ದರು. ತಾವು ಸ್ಕ್ಯಾನಿಂಗ್‌ಗೆ ಹೋಗಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ‘ಎರಡನೇ ದಿನ ಫೀಲ್ಡಿಂಗ್‌ ವೇಳೆ ಗಿಲ್‌ ಅವರ ತೋರು ಬೆರಳಿಗೆ ಗಾಯವಾಗಿದ್ದು, ಅವರು ಕ್ರೀಡಾಂಗಣಕ್ಕೆ ಇಳಿಯುವುದಿಲ್ಲ’ ಎಂದು ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಅವರು ನಾಲ್ಕು ಕ್ಯಾಚ್ ಪಡೆದಿದ್ದರು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.