ಎರಡನೇ ಟೆಸ್ಟ್‌ಗೆ ಲೀಚ್ ಅಲಭ್ಯ ವಿಶಾಖಪಟ್ಟಣ (ಪಿಟಿಐ): ಇಂಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಅವರು ಎಡ ಮೊಣಕಾಲಿನ ಗಾಯದಿಂದಾಗಿ ಭಾರತ ಎದುರಿನ ಎರಡನೇ ಟೆಸ್ಟ್‌ಗೆ ಅಲಭ್ಯರಾಗಲಿದ್ದಾರೆ. ಬುಧವಾರ ಇಲ್ಲಿ ನಡೆದ ತಂಡದ ಅಭ್ಯಾಸದಲ್ಲಿ ಅವರು ಭಾಗವಹಿಸಲಿಲ್ಲ. ಕ್ರೀಡಾಂಗಣದ ಒಂದು ಬದಿಯಲ್ಲಿ ಅವರು ತಂಡದ ಫಿಸಿಯೊರಿಂದ ಚಿಕಿತ್ಸೆ ಪಡೆದರು. ಹೈದರಾಬಾದಿನಲ್ಲಿ ಈಚೆಗೆ ನಡೆದಿದ್ದ ಪಂದ್ಯದ ಮೊದಲ ದಿನವೇ ಫೀಲ್ಡಿಂಗ್ ಮಾಡುವಾಗ ಲೀಚ್ ಗಾಯಗೊಂಡಿದ್ದರು. ಆ ನೋವಿನಲ್ಲಿಯೂ ಅವರು ಮೊದಲ ಇನಿಂಗ್ಸ್‌ನಲ್ಲಿ 26 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 10 ಓವರ್‌ ಬೌಲಿಂಗ್ ಮಾಡಿದ್ದರು. ‘ಲೀಚ್ ಬಹಳ ದೃಢ ಮನಸ್ಸು ಮತ್ತು ದೇಹದ ವ್ಯಕ್ತಿ. ಇನ್ನು ಕೆಲವೇ ದಿನಗಳಲ್ಲಿ ಅವರು ಸಂಪೂರ್ಣ ಫಿಟ್ ಆಗಿ ಬರುವರು’ ಎಂದು ಂಡದ ಆರಂಭಿಕ ಬ್ಯಾಟರ್ ಜ್ಯಾಕ್ ಕ್ರಾಲಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.