500 | ಕುಂಬ್ಳೆ ದಾಖಲೆ ಮೀರುವ ಯೋಚನೆ ಇಲ್ಲ: ಅಶ್ವಿನ್ ರಾಜ್‌ಕೋಟ್: ಕನ್ನಡಿಗ ಅನಿಲ್ ಕುಂಬ್ಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡಿರುವ ವಿಕೆಟ್ ಸಾಧನೆಯನ್ನು ಮೀರಿ ನಿಲ್ಲುವ ಗುರಿ ತಮ್ಮಗಿಲ್ಲ ಎಂದು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದರು. ಶುಕ್ರವಾರ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ದಾಖಲೆಯನ್ನು ಮುರಿಯಲು ಇನ್ನೂ 120 ವಿಕೆಟ್‌ಗಳನ್ನು ಪಡೆಯಬೇಕು. ನನಗೀಗ 37 ವರ್ಷ. ಈ ಸರಣಿ ಮುಗಿದ ನಂತರದ ಎರಡು ತಿಂಗಳಲ್ಲಿ ಏನಿದೆ ಹಾಗೂ ಭವಿಷ್ಯದಲ್ಲಿ ಏನೇಲ್ಲ ಇವೆ ಎಂಬುದು ಗೊತ್ತಿಲ್ಲ. ಸುಮ್ಮನೇ ದೊಡ್ಡ ನೆಗೆತದ ಕನಸು ಕಾಣುವುದಿಲ್ಲ. ಇಷ್ಟು ದಿನ ಅನುಸರಿಸಿದ ಸರಳ ಸೂತ್ರದಲ್ಲಿ ಮುಂದುವರಿಯು ತ್ತೇನೆ’ ಎಂದು ಸ್ಪಷ್ಟಪಡಿಸಿದರು. 'ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದೀರ್ಘ ಪ್ರಯಾಣ ಮಾಡಿರುವೆ. ನಾನೊಬ್ಬ ಆಕಸ್ಮಿಕ ಸ್ಪಿನ್ನರ್. ಬ್ಯಾಟರ್ ಆಗುವ ಆಸೆಯಿಂದ ಕ್ರಿಕೆಟ್‌ಗೆ ಬಂದಿದ್ದೆ. ಆದರೆ ಜೀವನ ನನಗೆ ಈ ಅವಕಾಶ ಕೊಟ್ಟಿತು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.