ಮಹಿಳಾ ಪ್ರಿಮಿಯರ್ ಲೀಗ್‌: ಆರ್‌ಸಿಬಿ– ವಾರಿಯರ್ಸ್‌ ಹಣಾಹಣಿ ಇಂದು ಬೆಂಗಳೂರು: ಮಹಿಳಾ ಪ್ರಿಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಶನಿವಾರ ಆರ್‌ಸಿಬಿ ಮತ್ತು ಯು.ಪಿ.ವಾರಿಯರ್ಸ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ತವರು ನೆಲದಲ್ಲಿ ಆರ್‌ಸಿಬಿ ಗೆಲುವಿನ ನಿರೀಕ್ಷೆಯಲ್ಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ ಹತ್ತು ದಿನಗಳಿಂದ ನಾಯಕಿ ಸ್ಮೃತಿ ಮಂದಾನ ನೇತೃತ್ವದ ತಂಡವು ಅಭ್ಯಾಸದಲ್ಲಿ ತೊಡಗಿದೆ. ಆರ್‌ಸಿಬಿ ತನ್ನ ಎಂಟು ಲೀಗ್ ಪಂದ್ಯಗಳಲ್ಲಿ ಐದನ್ನು ತವರು ನೆಲದಲ್ಲಿ ಆಡಲಿದೆ. ಯುವ ಆಟಗಾರ್ತಿಯರಿಗೆ ಈ ಟೂರ್ನಿಯಲ್ಲಿ ಅನುಭವಿ ಆಟಗಾರ್ತಿಯರೊಂದಿಗೆ ಆಡುವ ಅವಕಾಶ ದೊರೆಯುತ್ತಿದೆ. ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ನಾಯಕಿ ಸ್ಮೃತಿ ಮಂದಾನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವೇಗದ ವಿಭಾಗವನ್ನು ರೇಣುಕಾ ಸಿಂಗ್ ಮುನ್ನಡೆಸಲಿದ್ದು, ವಿಕೆಟ್ ಕೀಪರ್-ಬ್ಯಾಟರ್‌ ರಿಚಾ ಘೋಷ್ ತಂಡಕ್ಕೆ ಅಸ್ತ್ರವಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.