: ಇಂಗ್ಲೆಂಡ್‌ 145ಕ್ಕೆ ಆಲೌಟ್; ಭಾರತಕ್ಕೆ 152 ರನ್‌ಗಳ ಗೆಲುವಿನ ಗುರಿ ರಾಂಚಿ: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಅಂತಿಮ ಘಟಕ್ಕೆ ಬಂದಿದ್ದು ಭಾರತ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲಬೇಕಾದರೆ ಇನ್ನು 2 ದಿನಗಳಲ್ಲಿ 152 ರನ್‌ ಪೇರಿಸಬೇಕಿದೆ. ಭಾರತದ ಸ್ಪಿನ್ನರ್‌ಗಳ ದಾಳಿಗೆ ನಲುಗಿದ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಅಶ್ವಿನ್‌ 5, ಕುಲದೀಪ್‌ ಯಾದವ್‌ 4 ಹಾಗೂ ಜಡೇಜ 1 ವಿಕೆಟ್‌ ಪಡೆದರು. ಭಾರತ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದು ರೋಹಿತ್‌ ಶರ್ಮಾ 24, ಜೈಸ್ವಾಲ್‌ 16 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ಈ ಪಂದ್ಯವನ್ನು ಗೆಲ್ಲಬೇಕಾದರೆ ಉಳಿದ ಎರಡು ದಿನಗಳಲ್ಲಿ 152 ರನ್‌ ಹೊಡೆಯಬೇಕಿದೆ. ಸ್ಕೋರ್‌ ಇಂಗ್ಲೆಂಡ್‌ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌: 353 & 145 ಭಾರತ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌: 307 & 40/0 ! # 👌 👌 5️⃣ @ashwinravi99 4️⃣ @imkuldeep18 1️⃣ @ 🎯 - 192 ▶️ ://./FUbQ3Mhpq9 # | @ ../kpKvzoWV0p ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.