ಮಹಿಳಾ ಪ್ರೀಮಿಯರ್ ಲೀಗ್ | ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ; ಶುಭಾರಂಭದ ನಿರೀಕ್ಷೆ ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಟಾಸ್‌ ಗೆದ್ದಿರುವ ಯುಪಿ ವಾರಿಯರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ, ತವರಿನ ಅಂಗಳದಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ. ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ನಾಯಕಿಯಾಗಿರುವ ಯುಪಿ ಪಡೆಯೂ, ಆತಿಥೇಯರನ್ನು ಮಣಿಸುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದೆ. 2 ಓವರ್‌ ಮುಕ್ತಾಯವಾಗಿದ್ದು, ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 13 ರನ್ ಗಳಿಸಿದೆ. ನಾಯಕಿ ಸ್ಮೃತಿ ಮಂದಾನ (11) ಹಾಗೂ ಸೋಫಿ ಡಿವೈನ್‌ (1) ಕ್ರೀಸ್‌ನಲ್ಲಿದ್ದಾರೆ. ಮಂದಾನ, ಡಿವೈನ್‌, ಎಲಿಸ್ ಪೆರ್ರಿ, ರಿಚಾ ಘೋಷ್‌ ಹಾಗೂ ರೇಣುಕಾ ಠಾಕೂರ್‌ ಅವರನ್ನೊಳಗೊಂಡ ಆರ್‌ಸಿಬಿ, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಮತೋಲನದಿಂದ ಕೂಡಿದೆ. ಪಂದ್ಯ ಗೆದ್ದುಕೊಡಬಲ್ಲ ಆಟಗಾರ್ತಿಯರು ಯಪಿಯಲ್ಲೂ ಇದ್ದಾರೆ. 2023ರಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ತಹ್ಲಿಯಾ ಮೆಗ್ರಾಥ್‌ ಹಾಗೂ ನಾಯಕಿ ಹೀಲಿ, ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ಆಲ್‌ರೌಂಡರ್‌ ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್‌ ಅವರೂ ನಿರ್ಣಾಯಕ ಪ್ರದರ್ಶನ ನೀಡಬಲ್ಲರು. ಕಳೆದ ಆವೃತ್ತಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದ ಉಭಯ ತಂಡಗಳು, ತಲಾ ಒಂದೊಂದು ಪಂದ್ಯದಲ್ಲಿ ಜಯದ ನಗೆ ಬೀರಿದ್ದವು. 🔴🤝🟡 , ? 📣🏟️# # #ನಮ್ಮRCB #WPL2024 # ../Qf1YtvLYMb ಹನ್ನೊಂದರ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್‌, ಎಸ್‌.ಮೇಘನಾ, ಎಲಿಸ್ ಪೆರ್ರಿ, ರಿಚಾ ಘೋಷ್, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವರೆಹಮ್, ಶ್ರೇಯಾಂಕಾ ಪಾಟೀಲ್‌, ಸಿಮ್ರಾನ್ ಬಹದೂರ್‌, ಶೋಭನಾ ಆಶಾ, ರೇಣುಕಾ ಠಾಕೂರ್ ಸಿಂಗ್ ಯುಪಿ ವಾರಿಯರ್ಸ್‌ ಅಲಿಸ್ಸಾ ಹೀಲಿ (ನಾಯಕಿ), ಸೋಫಿ ಎಕ್ಲೆಸ್ಟೋನ್‌, ತಹ್ಲಿಯಾ ಮೆಗ್ರಾಥ್‌, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕವಾಡ್‌, ಕಿರನ್ ನವ್ಗಿರೆ, ವೃಂದಾ ದಿನೇಶ್‌, ಪೂನಂ ಖೇಮ್ನರ್, ಶೇತಾ ಶೆರಾವತ್, ಗ್ರೇಸ್ ಹ್ಯಾರಿಸ್, ಸೈಮಾ ಠಾಕೋರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.