ಪಂದ್ಯದ ವೇಳೆ ಅನುಚಿತ ವರ್ತನೆ: ಕ್ಯಾಪಿಟಲ್ಸ್ ಬೌಲರ್ ಅರುಂಧತಿ ರೆಡ್ಡಿಗೆ ದಂಡ ಬೆಂಗಳೂರು: ಯುಪಿ ವಾರಿಯರ್ಸ್‌ ವಿರುದ್ಧ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಅರುಂಧತಿ ರೆಡ್ಡಿ ಅವರಿಗೆ ಪಂದ್ಯ ಶುಲ್ಕದ ಶೇ 10ರಷ್ಟನ್ನು ದಂಡವಾಗಿ ವಿಧಿಸಲಾಗಿದೆ. ಡಬ್ಲ್ಯುಪಿಎಲ್‌ನ ಸಂಹಿತೆ 2.5ರ ಉಲ್ಲಂಘನೆಗಾಗಿ ಈ ದಂಡ ವಿಧಿಸಲಾಗಿದೆ. ಈ ವಿಧಿಯು ಅನುಚಿತ ಭಾಷೆ, ವರ್ತನೆ, ಸಂಜ್ಞೆಗೆ ಮೂಲಕ ಎದುರಾಳಿ ಬ್ಯಾಟರ್‌ ಪ್ರಚೋದಿಸಲು ಕಾರಣವಾಗುವ ವಿಷಯಕ್ಕೆ ಸಂಬಂಧಿಸಿದೆ. 26 ವರ್ಷದ ಅರುಂಧತಿ ಈ ಪಂದ್ಯದಲ್ಲಿ ಯುಪಿ ತಂಡದ ಕೆಳಕ್ರಮಾಂಕದ ಆಟಗಾರ್ತಿ ಪೂನಂ ಖೆಮ್ನಾರ್ ವಿಕೆಟ್‌ ಪಡೆದಿದ್ದರು. ಪಂದ್ಯವನ್ನು ಡೆಲ್ಲಿ ತಂಡ 9 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಅರುಂಧತಿ ಅವರು ತಪ್ಪನ್ನು ಒಪ್ಪಿಕೊಂಡಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.